ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸ್ವದೇಶಕ್ಕೆ ವಾಪಸಾದ ಪಾಕ್ ಅಧ್ಯಕ್ಷ ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವದೇಶಕ್ಕೆ ವಾಪಸಾದ ಪಾಕ್ ಅಧ್ಯಕ್ಷ ಜರ್ದಾರಿ
ಟೆಹ್ರಾನ್‌ನಲ್ಲಿ ನಡೆಯುತ್ತಿರುವ ಆರ್ಥಿಕ ಸಹಕಾರ ಒಕ್ಕೂಟದ ಶೃಂಗಸಭೆ ಪ್ರವಾಸದಲ್ಲಿದ್ದ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಬುಧವಾರ ತಡರಾತ್ರಿ ಸ್ವದೇಶಕ್ಕೆ ವಾಪಸಾಗಿದ್ದಾರೆ.

ತಕ್ಷಣ ತುರ್ತು ಸಭೆಯ ಕರೆದ ಜರ್ದಾರಿ ಪ್ರಸಕ್ತ ದೇಶದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರಧಾನಿ ಯ‌ೂಸುಫ್ ರಾಜಾ ಗಿಲಾನಿ ಮತ್ತು ಪಂಜಾಬ್ ರಾಜ್ಯಪಾಲ ಸಲ್ಮಾನ್ ತಶೀರ್ ಜತೆ ಚರ್ಚೆ ನಡೆಸಿದರು. ಆ ನಂತರ ತಡರಾತ್ರಿ ಪಿಎಂಎಲ್-ಎನ್ ನಾಯಕರ ಜತೆ ಕೂಡ ಅಧ್ಯಕ್ಷರು ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅದೇ ಹೊತ್ತಿಗೆ ಸೇನೆಯು ದೇಶದ ಆಡಳಿತ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂಬ ವರದಿಗಳನ್ನು ಮಾಜಿ ಪ್ರಧಾನಿ ನವಾಜ್ ಶರೀಫ್ ತಳ್ಳಿ ಹಾಕಿದ್ದಾರೆ. ಸರಕಾರದ ವಿರುದ್ಧ ಬಂಡೇಳುವಂತೆ ರಾಷ್ಟ್ರದಾದ್ಯಂತ ಜನತೆಗೆ ಕರೆ ನೀಡಿರುವ ಶರೀಫ್, "ಮಿಲಿಟರಿ ಆಡಳಿತ ಸಾಧ್ಯತೆ ನಿಚ್ಛಲವಾಗಿಯೂ ಇಲ್ಲ" ಎಂದಿದ್ದರು.

1999ರಲ್ಲಿ ಶರೀಫ್‌ರನ್ನು ಪದಚ್ಯುತಗೊಳಿಸಿ ರಕ್ತರಹಿತ ಕ್ರಾಂತಿಯಲ್ಲಿ ಆಗಿನ ಸೇನಾ ಮುಖ್ಯಸ್ಥ ಜನರಲ್ ಫರ್ವೇಜ್ ಮುಶರಫ್ ದೇಶದ ಚುಕ್ಕಾಣಿಯನ್ನು ಹಿಡಿದಿದ್ದರು.

ಈ ಹಿಂದೆ ಭರವಸೆ ನೀಡಿದಂತೆ ನ್ಯಾಯಾಧೀಶರನ್ನು ಮರುನೇಮಕಗೊಳಿಸದ ಹೊರತು ಜರ್ದಾರಿಯವರ ಜತೆ ಮಾತುಕತೆ ಅಸಾಧ್ಯ ಎಂದೂ ಶರೀಫ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಮಾರ್ಚ್ 16ರ ರ‌್ಯಾಲಿ ನಡೆಸಿಯೇ ಸಿದ್ಧ ಇದೇ ಸಂದರ್ಭದಲ್ಲಿ ಎಂದು ಪುನರುಚ್ಛರಿಸಿದ್ದಾರೆ.

ಇದಕ್ಕೂ ಮೊದಲು ಅಧ್ಯಕ್ಷರು ಟೆಹ್ರಾನ್‌ನಲ್ಲಿರುವಾಗ ಪ್ರಧಾನಿ ಯ‌‌ೂಸುಫ್ ರಾಜಾ ಗಿಲಾನಿಯವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಪಕ್ ಫರ್ವೇಜ್ ಕಯಾನಿ ಬುಧವಾರ ಭೇಟಿ ಮಾಡಿದ್ದು, ದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಭದ್ರತಾ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ದೇಶಾದ್ಯಂತ ನಡೆಯುತ್ತಿರುವ ವಕೀಲರುಗಳು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆ ವಿಚಾರಗಳು ಚರ್ಚೆಯ ವಿಷಯಗಳಾಗಿದ್ದವು ಎಂದು ತಿಳಿದು ಬಂದಿದೆ.

ಪ್ರಧಾನ ಮಂತ್ರಿಗಳ ಗೃಹ ಕಚೇರಿಯಲ್ಲಿ ಗಿಲಾನಿಯವರನ್ನು ಭೇಟಿಯಾದ ಕಯಾನಿ ದೇಶದ ಹಿತಾಸಕ್ತಿ ಬಗ್ಗೆ ಚರ್ಚಿಸಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಬೇರೆ ಯಾವುದೇ ವಿವರಗಳನ್ನು ನೀಡದೆ ತನ್ನ ವರದಿಯಲ್ಲಿ ತಿಳಿಸಿದೆ.

ಆದರೆ ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಸಲುವಾಗಿ ತಂತ್ರ ಹೆಣೆಯಲು ಇವರಿಬ್ಬರ ಭೇಟಿ ನಡೆದಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ಗಿಲಾನಿಯವರನ್ನು ಸೇನಾ ಮುಖ್ಯಸ್ಥ ಕಯಾನಿ ಬೆಂಬಲಿಸಿರುವುದು ಮತ್ತು ಶರೀಫ್ ಕೂಡ ಅದೇ ಧಾಟಿಯಲ್ಲಿ ಮಾತನಾಡಿರುವುದು ಈ ವರದಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದವು. ಇದೇ ಹಿನ್ನಲೆಯಲ್ಲಿ ಅಧ್ಯಕ್ಷ ಜರ್ದಾರಿಯವರು ದೇಶಕ್ಕೆ ವಾಪಸಾಗದಂತೆ ಸರ್ಕಾರ ಆದೇಶ ನೀಡಿದೆ ಎಂದೂ ಹೇಳಲಾಗಿತ್ತು. ಆದರೆ ಈ ವರದಿಗಳು ನಿರಾಧಾರವಾಗಿದ್ದು, ಅಂತಹ ಯಾವುದೇ ಆದೇಶಗಳನ್ನು ನೀಡಲಾಗಿಲ್ಲ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾ: ಕಟ್ಟಡ ಕುಸಿದು ಬಿದ್ದು 9 ಬಲಿ
ಲಂಕಾಕ್ಕೆ ತೆರಳಿದ ಭಾರತೀಯ ವೈದ್ಯರ ತಂಡ
ಕೂಡಲೇ ಹಿಂತಿರುಗದಂತೆ ಜರ್ದಾರಿಗೆ ಆದೇಶ
ಜರ್ಮನಿಯಲ್ಲಿ ಶೂಟಿಂಗ್‌ ಘಟನೆಗೆ 10 ಬಲಿ
ಅಂತಿಮ ದಿನಗಳನ್ನು ಎಣಿಸುತ್ತಿರುವ ಗೂಡಿ
'ರಾಜದ್ರೋಹಿ' ನವಾಜ್ ಷರೀಫ್ ಬಂಧನ ಸಾಧ್ಯತೆ