ಅಮೆರಿಕ ಬಾಹ್ಯಾಕಾಶ ನೌಕೆ ಡಿಸ್ಕವರಿಯ ಬಾಹ್ಯ ಟ್ಯಾಂಕ್ ಫಿಲ್ಲಿಂಗ್ ವ್ಯವಸ್ಥೆಯಲ್ಲಿ ಅನಿಲ ಸೋರಿಕೆಯನ್ನು ನಾಸಾ ಎಂಜಿನಿಯರುಗಳು ಪತ್ತಹಚ್ಚಿದ್ದರಿಂದ ನೌಕೆಯ ಉಡಾವಣೆಗೆ ಕೆಲವೇ ಗಂಟೆಗಳ ಮುನ್ನ ಮುಂದೂಡಲಾಗಿದೆ.
ನೌಕೆಯಲ್ಲಿ ಅತ್ಯಂತ ದಹನೀಯವಾದ ಹೈಡ್ರೋಜನ್ ಅನಿಲ ಸೋರಿಕೆ ಬಳಿಕ ಜಪಾನಿನ ಗಗನಯಾನಿ ಸಮೇತ 7 ಮಂದಿ ಯಾತ್ರಿಗಳಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೌಕೆಯ ಯಾತ್ರೆ ಕನಿಷ್ಠ 24 ಗಂಟೆಗಳ ವಿಳಂಬವಾಯಿತು.
ಕಳೆದ ಫೆ.12ರ ಮೂಲ ದಿನಾಂಕದಿಂದ ನಾಲ್ಕು ಬಾರಿ ಉಡಾವಣೆಯನ್ನು ತಡೆಹಿಡಿಯಲಾಗಿದ್ದು, ಡಿಸ್ಕವರಿ ಮತ್ತು ಅದರ ಸಿಬ್ಬಂದಿಗೆ ಇದು ಇನ್ನೊಂದು ಹತಾಶ ವಿಳಂಬವಾಗಿದೆ. ಮಧ್ಯಾಹ್ನ ಬಾಹ್ಯಾ ಟ್ಯಾಂಕ್‌ಗೆ ಇಂಧನ ತುಂಬಿದ ಕೂಡಲೇ ನಾಸಾ ಎಂಜಿನಿಯರುಗಳು ಸೋರಿಕೆಯನ್ನು ಪತ್ತೆಹಚ್ಚಿದರು. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಗುರುವಾರ ಯೋಜಿತ 0120 ಜಿಎಂಟಿ ಉಡಾವಣೆಗೆ ಕೆಲವೇ ಗಂಟೆಗಳ ಮುನ್ನ ಸೋರಿಕೆಯನ್ನು ಪತ್ತೆಹಚ್ಚಲಾಯಿತು. ಹೈಡ್ರೋಜನ್ ಒತ್ತಡ ನಿಯಂತ್ರಿಸುವ ಕವಾಟದಿಂದ ಸೋರಿಕೆ ಉಂಟಾಗುತ್ತಿತ್ತೆಂದು ಸಂಪರ್ಕ ನಿರ್ದೇಶಕ ಬಿಲ್ ಜಾನ್ಸನ್ ಹೇಳಿದ್ದಾರೆ.
|