ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ: ಜರ್ದಾರಿ ಕೊನೆಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ: ಜರ್ದಾರಿ ಕೊನೆಯತ್ನ
ಪಾಕಿಸ್ತಾನ ಅಧ್ಯಕ್ಷ ಜರ್ದಾರಿಯನ್ನು ಹೊರಗಿರಿಸಿ ರಾಜೀ ಸೂತ್ರ ಒಂದನ್ನು ಕಂಡು ಕೊಳ್ಳಲು ಪ್ರಧಾನಿ ಯ‌ೂಸುಫ್ ರಾಜಾ ಗಿಲಾನಿ ಹಾಗೂ ಸೇನಾಮುಖ್ಯಸ್ಥ ಜ.ಅಸ್ಫಾಖ್ ಪರ್ವೇಜ್ ಕಯಾನಿ ಮುಂದಾಗಿರುವಂತೆ, ಇತ್ತ ಕಡೆ ಜರ್ದಾರಿ ಪಿಎಂಎಲ್(ಕ್ಯು) ಜತೆಗೆ ಕೈಜೋಡಿಸಿ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ ರಚಿಸುವ ಕೊನೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ನವಾಜ್ ಷರಿಫ್ ಮತ್ತು ಗಿಲಾನಿ ಅವರ ನಡುವಿನ ಸಂಧಾನ ತಂತ್ರಕ್ಕೆ ಪ್ರತಿಯಾಗಿ ಜರ್ದಾರಿ ಈ ಕ್ರಮಕ್ಕೆ ಮುಂದಾಗಿದ್ದು, ಒಟ್ಟಾರೆಯಾಗಿ ಪಾಕಿಸ್ತಾನದ ಆಂತರಿಕ ರಾಜಕೀಯ ಬಿಕ್ಕಟ್ಟು ತೀವ್ರ ಉಲ್ಬಣಿಸಿದ್ದು, ಮತ್ತೊಮ್ಮೆ ಅತಂತ್ರದತ್ತ ಸಾಗಿದೆ.

ನವಾಜ್ ಷರೀಪ್ ಸಹೋದರ ಶಾಬಾಜ್ ನೇತೃತ್ವದ ಪಿಎಂಎಲ್(ಎನ್) ಸರಕಾರ ವಜಾಗೊಂಡ ಬಳಿಕ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಇಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ನಡೆಸಬೇಕು ಎಂಬುದು ಪ್ರಧಾನಿ ಗಿಲಾನಿ ಅವರ ಪ್ರಯತ್ನವಾಗಿದೆ.

ಗಿಲಾನಿಗೆ ಸೇನಾ ಬೆಂಬಲ
ಪಾಕಿಸ್ತಾನದ ಪ್ರಧಾನಮಂತ್ರಿ ಯ‌ೂಸುಫ್ ರಾಜಾ ಗಿಲಾನಿ ಮತ್ತು ಸೇನಾಮುಖಂಡ ಜ.ಅಸ್ಫಾಖ್ ಪರ್ವೇಜ್ ಕಯಾನಿ ಬುಧವಾರ ಸಭೆ ಸೇರಿ ರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಶಮನಕ್ಕೆ ರಾಜೀ ಸೂತ್ರವೊಂದಕ್ಕೆ ಸಮ್ಮತಿಸಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಕೇಂದ್ರಬಿಂದುವಾಗಿರುವ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿಗೆ ಹಲವಾರು ಕ್ರಮಗಳ ಮ‌ೂಲಕ ರಾಜಕೀಯ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಸೇನೆ ಅವರಿಗೆ ಒತ್ತಾಸೆಯಾಗಿ ನಿಂತಿದೆ.

ಪಂಜಾಬ್ ಪ್ರಾಂತ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಲು ಬಯಸದ ಗಿಲಾನಿ ನಿಲುವಿಗೆ ಕಯಾನಿ ಬೆಂಬಲಿಸಿದರೆಂದು ಪಾಕಿಸ್ತಾನ ಮಾಧ್ಯಮ ತಿಳಿಸಿದೆ. ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಚುನಾವಣೆ ಸ್ಪರ್ಧೆಯ ಅನರ್ಹತೆಯನ್ನು ಬದಲಿಸುವ ಮತ್ತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮ‌ೂರ್ತಿ ಇಫ್ತಿಕರ್ ಚೌದರಿಯನ್ನು ಮರುನೇಮಕ ಮಾಡಲು ಕಯಾನಿ ಮತ್ತು ಗಿಯಾನಿ ಕೋರಲಿದ್ದಾರೆಂದು ರಾಜೀಸೂತ್ರದ ಪ್ರಕಾರ ತಿಳಿದುಬಂದಿದೆ.

ಚೌಧರಿಯಲ್ಲದೇ ಇನ್ನಿತರ ನ್ಯಾಯಾಧೀಶರ ಮರುನೇಮಕಾತಿಗೆ ಸಹ ನಾಯಕದ್ವಯರು ಚರ್ಚಿಸಿದರು. ನವಾಜ್ ಷರೀಫ್ ಭದ್ರನೆಲೆಯಾಗಿದ್ದ ಪಂಜಾಬ್‌ನಲ್ಲಿ ಹೇರಲಾಗಿರುವ ಗವರ್ನರ್ ಆಡಳಿತವನ್ನು ವಿಸ್ತರಿಸದಿರುವ ಕುರಿತು ಗಿಲಾನಿಯನ್ನು ಭೇಟಿ ಮಾಡಿದ ಕಯಾನಿ ಚರ್ಚಿಸಿದರೆಂದು ತಿಳಿದುಬಂದಿದೆ. ಜನಾದೇಶವಿರುವ ಪಕ್ಷ ಅಲ್ಲಿ ಸರ್ಕಾರ ಸ್ಥಾಪಿಬೇಕೆಂಬ ಅಭಿಪ್ರಾಯವನ್ನು ಗಿಲಾನಿ ವ್ಯಕ್ತಪಡಿಸಿದರು.

ವಕೀಲರು, ನಾಗರಿಕ ಸಮಾಜ ಮತ್ತು ಪ್ರತಿಪಕ್ಷದಿಂದ ಸುದೀರ್ಘ ಮೆರವಣಿಗೆ ಮತ್ತು ಧರಣಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಮಿಲಿಟರಿ ಮತ್ತು ರಾಜಕೀಯ ನಾಯಕತ್ವ ತೀವ್ರ ಕಳವಳ ವ್ಯಕ್ತಪಡಿಸಿತೆಂದು ವರದಿಯೊಂದು ತಿಳಿಸಿದೆ. ಪ್ರಸಕ್ತ ರಾಜಕೀಯ ಬಿಕ್ಕಟ್ಟಿನಲ್ಲಿ ಇನ್ನೊಂದು ಮಿಲಿಟರಿ ಬೆಂಬಲಿತ ಕೈವಶದ ಬದಲಿಗೆ ಮರುಸಂಧಾನ ಮಾಡುವ ಪ್ರಧಾನಮಂತ್ರಿ ಉಪಕ್ರಮಕ್ಕೆ ಪಾಕಿಸ್ತಾನ ಸೇನೆ ಬೆಂಬಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿಸ್ಕವರಿ ಉಡಾವಣೆಗೆ ಅನಿಲ ಸೋರಿಕೆ ಅಡ್ಡಿ
ಪಾಕ್‌ನಲ್ಲಿ ಸರ್ಕಾರಿ ವಿರೋಧಿ ರ‌್ಯಾಲಿ ಆರಂಭ
ಅಜೀಜ್, ಕೆಮಿಕಲ್ ಅಲಿಗೆ 15 ವರ್ಷ ಜೈಲು
ಪೇಶಾವರ ಸಚಿವರ ಹತ್ಯೆಯತ್ನ: ನಾಲ್ವರು ಸಾವು
ತನ್ನ ಹತ್ಯೆಗೆ ಅಧಿಕಾರಿಗಳ ಪಿತೂರಿ: ಷರೀಫ್ ಆರೋಪ
ಶ್ರೀಲಂಕಾ ಹೋರಾಟದಲ್ಲಿ ಸೆಲ್ವದುರೈ ನಿಧನ