ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಮೇಲೆ ಬೂಟುಗಳನ್ನು ಎಸೆದು ಅರಬ್ ಜಗತ್ತಿನ ಪಾಲಿಗೆ 'ಹೀರೊ'ಎನಿಸಿಕೊಂಡ ಇರಾಕಿನ ಪತ್ರಕರ್ತನಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಬಾಗ್ದಾದ್ನಲ್ಲಿ ಆರೋಪಿ ಪತ್ರಕರ್ತನ ವಿಚಾರಣೆ ನಡೆದಾಗ' ಯಾವುದೇ ಇರಾಕಿಯಂತೆ ತಮ್ಮ ಪ್ರತಿಕ್ರಿಯೆ ಸಾಮಾನ್ಯವಾಗಿತ್ತು' ಎಂದು ನ್ಯಾಯಾಧೀಶರಿಗೆ ಹೇಳಿದ ಮುಂತದರ್ ಅಲ್ ಜೈದಿ ತಾವು ತಪ್ಪಿತಸ್ಥರಲ್ಲವೆಂದು ನುಡಿದರು.
ಇರಾಕ್ಗೆ ವಿದಾಯದ ಪ್ರವಾಸ ಕೈಗೊಂಡಿದ್ದ ವೇಳೆ ಬುಷ್ ಮೇಲೆ ಬೂಟು ಪ್ರಹಾರ ನಡೆಸಲಾಗಿತ್ತು.
ಜೈದಿಯ ಪ್ರತಿವಾದಿ ತಂಡದ ದಿಯಾ ಅಲ್ ಸಾದಿ ಶಿಕ್ಷೆಯನ್ನು ಕಠಿಣ ಎಂದು ಹೇಳಿದ್ದು, ಕಾನೂನಿಗೆ ಸಮ್ಮತವಾಗಿಲ್ಲದಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ನುಡಿದಿದ್ದಾರೆ. ತೀರ್ಪನ್ನು ಓದುತ್ತಿದ್ದಂತೆ ಜೈದಿ ಇರಾಕ್ ದೀರ್ಘಾಯುವಾಗಲಿ ಎಂದು ಕೂಗಿದನೆಂದು ವರದಿಯೊಂದು ತಿಳಿಸಿದೆ. ಜೈದಿಯ ಸೋದರಿ ರುಕೈಯಾ ಕಣ್ಣೀರಧಾರೆ ಹರಿಸಿ, ಅಮೆರಿಕದ ಏಜಂಟ್ ಮಲಿಕಿಗೆ ಧಿಕ್ಕಾರ ಎಂದು ನುಡಿದರು.
|