ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧಿ ಮಾರ್ಗ ಅನುಸರಿಸುತ್ತಿರುವ ಒಬಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ಮಾರ್ಗ ಅನುಸರಿಸುತ್ತಿರುವ ಒಬಾಮ
ವಾಷಿಂಗ್ಟನ್: ಮಹಾತ್ಮಾ ಗಾಂಧಿ ತಮಗೆ ಸ್ಫೂರ್ತಿ ನೀಡಿದವರಲ್ಲೊಬ್ಬರು ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದು, ರ‌್ಯಾಲಿಗಳಲ್ಲಿ ಅಂತರಧರ್ಮೀಯ ಪ್ರಾರ್ಥನೆಗಳಿಗೆ ಆದ್ಯತೆ ನೀಡುವ ಮ‌ೂಲಕ ಧಾರ್ಮಿಕ ರಾಜಕೀಯದ ನೂತನ ಗಡಿಯನ್ನು ತೆರೆದಿದ್ದಾರೆ. ಧಾರ್ಮಿಕೇತರ ಸಮಾರಂಭಗಳಾದ ಉತ್ತೇಜನ ರ‌್ಯಾಲಿಗಳೂ ಸೇರಿದಂತೆ ಒಬಾಮಾ ಆಡಳಿತದ ಅಧ್ಯಕ್ಷೀಯ ಸಮಾರಂಭಗಳಲ್ಲಿ ಪ್ರಾರ್ಥನೆ ಈಗ ವಾಡಿಕೆಯಾಗಿದೆ. ವಿವಿಧ ಧರ್ಮಗಳ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತಿದ್ದ ಗಾಂಧೀಜಿ ಸಭೆಗಳನ್ನು ಒಬಾಮಾ ಆಡಳಿತ ಅನುಕರಿಸಿದೆ.

ತಮ್ಮ ಅಧಿಕಾರ ಸ್ವೀಕಾರ ಸಮಾರಂಭದ ಭಾಷಣದಲ್ಲಿ ಕೂಡ ನಮ್ಮದು ಕ್ರೈಸ್ತರು, ಮುಸ್ಲಿಮರು, ಯಹೂದಿಗಳು, ಹಿಂದೂಗಳು ಮತ್ತು ನಾಸ್ತಿಕರ ರಾಷ್ಟ್ರವೆಂದೂ, ಭೂಮಿಯ ಪ್ರತಿಮ‌ೂಲೆಯಿಂದ ತೆಗೆದುಕೊಂಡ ಪ್ರತಿಯೊಂದು ಭಾಷೆ, ಸಂಸ್ಕೃತಿಯಿಂದ ತಾವು ರೂಪಗೊಂಡಿದ್ದಾಗಿ ಒಬಾಮಾ ಹೇಳಿದ್ದರು. ಅದೇ ದಿನ ಅವರು ರಾಷ್ಟ್ರೀಯ ಕೆಥಡ್ರಲ್‌ಗೆ ಅಂತರಧರ್ಮೀಯ ಪ್ರಾರ್ಥನೆಗಾಗಿ ತೆರಳಿದ್ದರು ಮತ್ತು ಉಪಾಧ್ಯಕ್ಷ ಜೋಸೆಫ್ ಬಿಡನ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭಾಗವಹಿಸಿದ್ದರು.

ಆ ಪ್ರಾರ್ಥನಾ ಸಭೆಯಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮಗಳ ಮಹಿಳಾ ನಾಯಕರು ಸೇರಿದಂತೆ ವಿವಿಧ ಧರ್ಮಗಳನ್ನು ಪ್ರತಿನಿಧಿಸುವ 20 ಧರ್ಮಗುರುಗಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡಳಿತಾವಧಿ ಪೂರ್ಣಗೊಳಿಸಲು ಜರ್ದಾರಿಗೆ ಅಸಾಧ್ಯ: ಶರೀಫ್
ಬುಶ್ ಮೇಲೆ ಬೂಟೆಸೆದ ಪತ್ರಕರ್ತನಿಗೆ ಶಿಕ್ಷೆ
ಡಿಸ್ಕವರಿ ಉಡಾವಣೆ ರದ್ದು
ಬುಷ್‌ಗೆ ಮೇಲೆ ಬೂಟೆಸೆದ ಜೈದಿಗೆ 3 ವರ್ಷ ಸೆರೆ
ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ: ಜರ್ದಾರಿ ಕೊನೆಯತ್ನ
ಡಿಸ್ಕವರಿ ಉಡಾವಣೆಗೆ ಅನಿಲ ಸೋರಿಕೆ ಅಡ್ಡಿ