ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಟಿಬೆಟ್ ಮಾತುಕತೆಯಲ್ಲಿ ಪ್ರಗತಿ ಒಬಾಮ ಆಶಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಬೆಟ್ ಮಾತುಕತೆಯಲ್ಲಿ ಪ್ರಗತಿ ಒಬಾಮ ಆಶಯ
ಬೀಜಿಂಗ್ ಮತ್ತು ದಲೈಲಾಮಾ ಪ್ರತಿನಿಧಿಗಳ ನಡುವೆ ವಿವಾದಾತ್ಮಕ ವಿಷಯದ ಮಾತುಕತೆ ಪ್ರಗತಿ ಹೊಂದಬಹುದೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಆಶಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವ ಯಾಂಗ್ ಜೈಚಿ ಜತೆ ನಡೆದ ಭೇಟಿಯಲ್ಲಿ ಟಿಬೆಟ್ ವಿಷಯವನ್ನು ಪ್ರಸ್ತಾಪಿಸಿದ ಒಬಾಮಾ ಮೇಲಿನಂತೆ ತಿಳಿಸಿದರು.

ಟಿಬೆಟ್‌ನಲ್ಲಿ ಚೀನಾದ ದಮನಕಾರಿ ನೀತಿ ವಿರುದ್ಧ ಟಿಬೆಟಿಯನ್ನರು ಪ್ರತಿಭಟಿಸುತ್ತಿದ್ದು, ಟಿಬೆಟ್ ದಾರ್ಮಿಕ ಗುರು ದಲೈಲಾಮಾ ಟಿಬೆಟ್‌ ಚೀನಾದ ದೌರ್ಜನ್ಯದಿಂದ ನರಕಸದೃಶವಾಗಿದ್ದು, ಟಿಬೆಟ್‌ಗೆ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ವೇತಭವನದಲ್ಲಿ ಓವಲ್ ಕಚೇರಿಯಲ್ಲಿ ಯಾಂಗ್ ಜತೆ ಭೇಟಿಯ ಸಂದರ್ಭದಲ್ಲಿ ಚೀನಕ್ಕೆ ಅಹಿತಕಾರಿಯಾಗಿದ್ದರೂ ಟಿಬೆಟ್ ವಿವಾದವನ್ನು ಒಬಾಮಾ ಪ್ರಸ್ತಾಪಿಸಿದರು.

ಚೀನಾ ಸರ್ಕಾರ ಮತ್ತು ದಲೈಲಾಮಾ ಪ್ರತಿನಿಧಿಗಳ ನಡುವೆ ಮಾತುಕತೆಯಲ್ಲಿ ಪ್ರಗತಿ ಕಾಣುವುದೆಂದು ಅಧ್ಯಕ್ಷರು ಆಶಾಭಾವನೆ ವ್ಯಕ್ತಪಡಿಸಿದರೆಂದು ಭೇಟಿ ಬಳಿಕ ಶ್ವೇತಭವನದ ಹೇಳಿಕೆ ತಿಳಿಸಿದೆ.ಅಮೆರಿಕದ ಜಾಗತಿಕ ವಿದೇಶಾಂಗ ನೀತಿಯಲ್ಲಿ ಮಾನವ ಹಕ್ಕುಗಳಿಗೆ ಉತ್ತೇಜನ ಅವಶ್ಯಕ ಅಂಶವೆಂದು ಒಬಾಮಾ ಮಾತುಕತೆಯಲ್ಲಿ ಗಮನಸೆಳೆದಿದ್ದಾರೆ. ಟಿಬೆಟ್‌ನಲ್ಲಿ ಮಾನ ಹಕ್ಕು ದೌರ್ಜನ್ಯಗಳ ಬಗ್ಗೆ ಈ ವಾರದ ಆದಿಯಲ್ಲಿ ಕಳವಳ ವ್ಯಕ್ತಪಡಿಸಿದ್ದ ಅಮೆರಿಕ ದಲೈಲಾಮಾ ಪ್ರತಿನಿಧಿ ಜತೆ ಗಮನಾರ್ಹ ಮಾತುಕತೆಯು ಈ ವಲಯದಲ್ಲಿ ನಿರಂತರ ಶಾಂತಿ ತರಬಹುದೆಂದು ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರಾಕ್ ಒಬಾಮ, ಬೀಜಿಂಗ್, ದಲೈಲಾಮಾ
ಮತ್ತಷ್ಟು
ಕುರ್ರಂನಲ್ಲಿ ಅಮೆರಿದ ಡ್ರೋನ್ ವಿಮಾನ ದಾಳಿಗೆ 7 ಬಲಿ
ಗಾಂಧಿ ಮಾರ್ಗ ಅನುಸರಿಸುತ್ತಿರುವ ಒಬಾಮ
ಆಡಳಿತಾವಧಿ ಪೂರ್ಣಗೊಳಿಸಲು ಜರ್ದಾರಿಗೆ ಅಸಾಧ್ಯ: ಶರೀಫ್
ಬುಶ್ ಮೇಲೆ ಬೂಟೆಸೆದ ಪತ್ರಕರ್ತನಿಗೆ ಶಿಕ್ಷೆ
ಡಿಸ್ಕವರಿ ಉಡಾವಣೆ ರದ್ದು
ಬುಷ್‌ಗೆ ಮೇಲೆ ಬೂಟೆಸೆದ ಜೈದಿಗೆ 3 ವರ್ಷ ಸೆರೆ