ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ನಾಯಕರೊಂದಿಗೆ ಹಾಲ್‌ಬ್ರೂಕ್ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ನಾಯಕರೊಂದಿಗೆ ಹಾಲ್‌ಬ್ರೂಕ್ ಚರ್ಚೆ
ಪಾಕಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಕ್ಷೋಭೆಯಿಂದ ತೀವ್ರ ಆತಂಕಿತರಾಗಿರುವ ಪಾಕಿಸ್ತಾನದಲ್ಲಿ ಅಮೆರಿಕದ ಮುಖ್ಯ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಜರ್ದಾರಿ ಜತೆ ಗುರುವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ರಾಷ್ಟ್ರದ ಉದ್ವಿಗ್ನಕಾರಿ ಸ್ಥಿತಿ ಉಲ್ಬಣಿಸದಂತೆ ಖಾತರಿ ಮಾಡಿಕೊಳ್ಳುವಂತೆ ಅವರು ಜರ್ದಾರಿಗೆ ಸೂಚಿಸಿದ್ದಾರೆ.

ಹಾಲ್‌ಬ್ರೂಕ್ ಗಿಲಾನಿ ಜತೆ ಕೂಡ ಮಾತನಾಡಿದ್ದಾರೆಂದು ವಿದೇಶಾಂಗ ಇಲಾಖೆಯ ಉಸ್ತುವಾರಿ ವಕ್ತಾರ ರಾಬರ್ಟ್ ವುಡ್ ತಿಳಿಸಿದರು. ಪಾಕಿಸ್ತಾನಕ್ಕೆ ಅಮೆರಿಕದ ರಾಯಭಾರಿ ಅನ್ನೆ ಪ್ಯಾಟರ್‌ಸನ್ ಲಾಹೋರ್‌ನಲ್ಲಿ ಪ್ರತಿಪಕ್ಷದ ನಾಯಕ ನವಾಜ್ ಷರೀಫ್ ಜತೆ ಕೂಡ ಮಾತನಾಡಿದ್ದಾರೆ.

ಜರ್ದಾರಿ ಪ್ಯಾಟರ್‌ಸನ್ ಮತ್ತು ಹಾಲ್‌ಬ್ರೂಕ್ ಜತೆ ಮ‌ೂರು ಮಾರ್ಗಗಳ ಟೆಲಿಕಾನ್ಫರೆನ್ಸ್ ಕೂಡ ನಡೆಸಿದರು. 30 ನಿಮಿಷಗಳ ಕಾಲ ನಡೆದ ಟೆಲಿಕಾನ್ಫರೆನ್ಸ್‌ನಲ್ಲಿ ಪಾಕಿಸ್ತಾನ ಮತ್ತು ಅಮೆರಿಕದ ಪರಸ್ಪರ ಹಿತಾಸಕ್ತಿಯ ವಿಷಯಗಳು ಚರ್ಚೆಯಾದವು ಎಂದು ಅಧ್ಯಕ್ಷರ ವಕ್ತಾರ ಫರಾತುಲ್ಲಾ ಬಾಬರ್ ತಿಳಿಸಿದರು
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿಬೆಟ್ ಮಾತುಕತೆಯಲ್ಲಿ ಪ್ರಗತಿ ಒಬಾಮ ಆಶಯ
ಕುರ್ರಂನಲ್ಲಿ ಅಮೆರಿದ ಡ್ರೋನ್ ವಿಮಾನ ದಾಳಿಗೆ 7 ಬಲಿ
ಗಾಂಧಿ ಮಾರ್ಗ ಅನುಸರಿಸುತ್ತಿರುವ ಒಬಾಮ
ಆಡಳಿತಾವಧಿ ಪೂರ್ಣಗೊಳಿಸಲು ಜರ್ದಾರಿಗೆ ಅಸಾಧ್ಯ: ಶರೀಫ್
ಬುಶ್ ಮೇಲೆ ಬೂಟೆಸೆದ ಪತ್ರಕರ್ತನಿಗೆ ಶಿಕ್ಷೆ
ಡಿಸ್ಕವರಿ ಉಡಾವಣೆ ರದ್ದು