ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಸೇನಾಡಳಿತ ವಶ ಸಾಧ್ಯತೆ ಶೂನ್ಯ: ಷರೀಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಸೇನಾಡಳಿತ ವಶ ಸಾಧ್ಯತೆ ಶೂನ್ಯ: ಷರೀಫ್
ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ನಡುವೆ, "ಸೇನೆ ಆಡಳಿತವನ್ನು ಕೈವಶ ಮಾಡಿಕೊಳ್ಳುವ ಅವಕಾಶ ಸಂಪೂರ್ಣವಾಗಿ ಇಲ್ಲ" ಎಂದು 1999ರ ಮಿಲಿಟರಿ ಕ್ರಾಂತಿಯಲ್ಲಿ ಪದಚ್ಯುತರಾಗಿದ್ದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ. ವಜಾಗೊಂಡ ನ್ಯಾಯಾಧೀಶರ ಮರುನೇಮಕದ ವಿಷಯದ ಬಗ್ಗೆ ಅಧ್ಯಕ್ಷ ಜರ್ದಾರಿ ಜತೆ ಜಟಾಪಟಿಗೆ ಇಳಿದಿರುವ ಷರೀಫ್, ತಮ್ಮ ಪಿಎಂಎಲ್-ಎನ್ ಪಕ್ಷವು ನ್ಯಾಯಾಧೀಶರ ಮರುನೇಮಕ ಒತ್ತಾಯಿಸಿ ದೀರ್ಘ ಮೆರವಣಿಗೆಯನ್ನು ನಿಲ್ಲಿಸದೇ ಮುಂದುವರಿಸುವುದು ಎಂದು ಹೇಳಿದರು.
PTI

ಜರ್ದಾರಿ ಮುಂಚೆ ಭರವಸೆ ನೀಡಿದಂತೆ ನ್ಯಾಯಾಧೀಶರನ್ನು ಮರುನೇಮಕ ಮಾಡಿದರೆ ಮಾತ್ರ ಅವರ ಜತೆ ಮಾತುಕತೆ ಸಾಧ್ಯವಾಗುತ್ತದೆಂದು ಜರ್ದಾರಿ ನುಡಿದರು. ಜರ್ದಾರಿ ಮತ್ತು ತಮ್ಮ ನಡುವೆ ಅಗಾಧ ವಿಶ್ವಾಸಾರ್ಹತೆಯ ಅಂತರ ಮತ್ತು ನಂಬಿಕೆಯ ಕೊರತೆ ತುಂಬಿದೆ. ಮಾತುಕತೆ ಪ್ರಸ್ತಾಪದ ಮ‌ೂಲಕ ಸರ್ಕಾರ ಸಮಯ ನೂಕುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಸುಪ್ರೀಂಕೋರ್ಟ್ ಇತ್ತೀಚೆಗೆ ಷರೀಫ್ ಮತ್ತು ಅವರ ಸೋದರ ಶಾಬಾಜ್ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಿದ್ದರಿಂದ ಶಾಬಾಜ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಪದವಿಯಿಂದ ಪದಚ್ಯುತರಾಗಿದ್ದರು ಮತ್ತು ಅಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಷರೀಫ್, ತಾವು ಮತ್ತು ಸೋದರ ಶಾಬಾಜ್ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಅಧ್ಯಕ್ಷರು ಸುಪ್ರೀಂಕೋರ್ಟ್ ನೆರವು ಪಡೆದರು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗವಿರದ ಪಂಜಾಬ್‌ನಲ್ಲಿ ರಾಜ್ಯಪಾಲರ ಆಡಳಿತ ಜಾರಿಮಾಡಿದರೆಂದು ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ನಾಯಕರೊಂದಿಗೆ ಹಾಲ್‌ಬ್ರೂಕ್ ಚರ್ಚೆ
ಟಿಬೆಟ್ ಮಾತುಕತೆಯಲ್ಲಿ ಪ್ರಗತಿ ಒಬಾಮ ಆಶಯ
ಕುರ್ರಂನಲ್ಲಿ ಅಮೆರಿದ ಡ್ರೋನ್ ವಿಮಾನ ದಾಳಿಗೆ 7 ಬಲಿ
ಗಾಂಧಿ ಮಾರ್ಗ ಅನುಸರಿಸುತ್ತಿರುವ ಒಬಾಮ
ಆಡಳಿತಾವಧಿ ಪೂರ್ಣಗೊಳಿಸಲು ಜರ್ದಾರಿಗೆ ಅಸಾಧ್ಯ: ಶರೀಫ್
ಬುಶ್ ಮೇಲೆ ಬೂಟೆಸೆದ ಪತ್ರಕರ್ತನಿಗೆ ಶಿಕ್ಷೆ