ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚಿಂಪಾಂಜಿ ಹೋಲಿಕೆಗೆ ಕ್ಷಮೆ ಕೋರಿದ ಬಿಬಿಸಿ ವಾಚಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಂಪಾಂಜಿ ಹೋಲಿಕೆಗೆ ಕ್ಷಮೆ ಕೋರಿದ ಬಿಬಿಸಿ ವಾಚಕ
ಶ್ರೀಲಂಕಾ ಸಂಜಾತ ಸಹೋದ್ಯೋಗಿ ಜಾರ್ಜ್ ಅಲಗಯ್ಯ ಮತ್ತು ಚಿಂಪಾಂಜಿ ನಡುವೆ ಸಾಮ್ಯ ಕಾಣುತ್ತದೆಯೇ ಎಂದು ವೀಕ್ಷಕರಿಗೆ ಹಾಸ್ಯಚಟಾಕಿ ಹಾರಿಸಿದ್ದ ಬಿಬಿಸಿ ಸುದ್ದಿವಾಚಕ ಕ್ರಿಸ್ ಎಕಿನ್ ಕ್ಷಮಾಪಣೆ ಕೋರಿದ್ದಾರೆ.

ಸ್ವೀಡನ್ ಮೃಗಾಲಯದಲ್ಲಿ ಚಿಂಪಾಂಜಿಯೊಂದು ಕಲ್ಲುಗಳನ್ನು ಸಂಗ್ರಹಿಸಿ ಪ್ರವಾಸಿಗಳತ್ತ ತೂರುವ ಬಗ್ಗೆ ಎಕಿನ್ ಚರ್ಚಿಸುತ್ತಾ, ಇವರಿಬ್ಬರಲ್ಲಿ ಹೋಲಿಕೆಯಿದೆಯೇ ಎಂದು ಪ್ರಶ್ನಿಸಿದ್ದರು. ಬಳಿಕ ಮೈಕನ್ನು 53ರ ಪ್ರಾಯದ, ತಮಿಳಿಗ ಅಲಗಯ್ಯಗೆ ನೀಡಿದರು. ಅಲಗಯ್ಯ ಚಕಿತರಾದಂತೆ ಕಂಡುಬಂದರೂ ಎಕಿನ್ ಹಾಸ್ಯಕ್ಕೆ ನಕ್ಕರು. ಟಿಯುಸಿಯ ಜನಾಂಗೀಯ ಸಮಾನತೆ ಅಧಿಕಾರಿ ವಿಲ್ಫ್ ಸುಲ್ಲಿವಾನ್ ಇದಕ್ಕೆ ಪ್ರತಿಕ್ರಿಯಿಸುತ್ತಾ, ಅವರ ಜೋಕು ಲಘುಹಾಸ್ಯದಿಂದ ಕೂಡಿದ್ದರೂ ಇದೊಂದು ಗಂಭೀರ ಸುದ್ದಿ ಕಾರ್ಯಕ್ರಮವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ದುರುದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಮಾಡಿದ ತಿಳಿಹಾಸ್ಯವಾಗಿದ್ದು, ಅದಕ್ಕಿಂತ ಹೆಚ್ಚಿಗೆ ಜಾರ್ಜ್ ವ್ಯಾಖ್ಯಾನಿಸುವುದಿಲ್ಲ ಎಂದು ತಮಗೆ ಗೊತ್ತಿದೆ. ಜಾರ್ಜ್ ಮತ್ತು ತಾವು ಹಳೆಯ ಸ್ನೇಹಿತರಾಗಿದ್ದು, ಯಾವುದೇ ಅಪರಾಧವಾಗಿದ್ದರೆ ಕ್ಷಮ ಕೋರುವುದಾಗಿ ಎಕಿನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿಗೆ 24 ಗಂಟೆ ಗಡು ನೀಡಿದ ಅಮೆರಿಕ
ಉ.ಕೊರಿಯ ರಾಕೆಟ್‌ಗೆ ಶೂಟ್: ಜಪಾನ್ ಎಚ್ಚರಿಕೆ
ಪಾಕ್ ಸೇನಾಡಳಿತ ವಶ ಸಾಧ್ಯತೆ ಶೂನ್ಯ: ಷರೀಫ್
ಪಾಕ್ ನಾಯಕರೊಂದಿಗೆ ಹಾಲ್‌ಬ್ರೂಕ್ ಚರ್ಚೆ
ಟಿಬೆಟ್ ಮಾತುಕತೆಯಲ್ಲಿ ಪ್ರಗತಿ ಒಬಾಮ ಆಶಯ
ಕುರ್ರಂನಲ್ಲಿ ಅಮೆರಿದ ಡ್ರೋನ್ ವಿಮಾನ ದಾಳಿಗೆ 7 ಬಲಿ