ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧಿ ವಸ್ತುಗಳ ವಾಪಸ್‌‌: ಓಟಿಸ್ ದಾವೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ವಸ್ತುಗಳ ವಾಪಸ್‌‌: ಓಟಿಸ್ ದಾವೆ
ND
ಆಂಟಿಕೋರಂ ಹರಾಜುದಾರರಿಂದ 1.8 ದಶಲಕ್ಷ ಡಾಲರ್‌ಗೆ ಹರಾಜಾದ ಮಹಾತ್ಮಾ ಗಾಂಧಿ ಪರಿಕರಗಳ ಮಾಲಿಕ, ಅಮೆರಿಕ ಮ‌ೂಲದ ಸಂಗ್ರಹಕಾರ ಜೇಮ್ಸ್ ಓಟಿಸ್, ಹರಾಜಾದ ಗಾಂಧಿ ವಸ್ತುಗಳನ್ನು ಪುನಃ ವಾಪಸು ಪಡೆಯಲು ನ್ಯೂಯಾರ್ಕ್ ನಗರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ಹೇಳಿದ್ದಾರೆ.

ತಮ್ಮ ವಕೀಲರು ವಿವರಗಳಿಗೆ ಅಂತಿಮರೂಪ ನೀಡುತ್ತಿದ್ದು, ಯಾವ ಆಧಾರದ ಮೇಲೆ ಪರಿಕರಗಳನ್ನು ಪಾಪಸು ಪಡೆಯಲು ಕೋರಿದ್ದೆಂದು ತಿಳಿಸಿಲ್ಲ. ಮಹಾತ್ಮಗಾಂಧಿ ಅವರ ದುಂಡು ಕನ್ನಡಕಗಳು ಮತ್ತಿತರ ಖಾಸಗಿ ವಸ್ತುಗಳಾದ ಪಾಕೆಟ್ ಗಡಿಯಾರ, ಪಾದರಕ್ಷೆಗಳು, ತಟ್ಟೆ ಮತ್ತು ಬೊಗುಣಿ ಮುಂತಾದುವನ್ನು ಭಾರತದ ಉದ್ಯಮಿ ವಿಜಯ ಮಲ್ಯ ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಖರೀದಿಸಿದ್ದರು.

ಗಾಂಧಿ ವಸ್ತುಗಳ ಹರಾಜನ್ನು ಹಿಂದೆಗೆದುಕೊಳ್ಳಬೇಕೆಂದು ಓಟಿಸ್ ಕೋರಿದ್ದರೂ ಹರಾಜುದಾರರು ಹರಾಜನ್ನು ಹಿಂತೆಗೆಯಲು ನಿರಾಕರಿಸಿ ಹರಾಜು ಮಾಡಿದ ವೇಳೆ ಅವುಗಳನ್ನು ವಿಜಯ ಮಲ್ಯ ಖರೀದಿಸಿದ್ದರು. ಹರಾಜನ್ನು ಸ್ಥಗಿತಗೊಳಿಸುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಅಮೆರಿಕ ನ್ಯಾಯಾಂಗ ಇಲಾಖೆ ನೋಟಿಸ್ ನೀಡಿದ ಕಾರಣ ಎರಡು ವಾರಗಳವರೆಗೆ ಗಾಂಧಿ ಪರಿಕರಗಳನ್ನು ಇಲ್ಲೇ ಇಟ್ಟುಕೊಳ್ಳುವುದಾಗಿ ಆಂಟಿಕೋರಂ ತಿಳಿಸಿದೆ.

ಈ ಪರಿಕರಗಳನ್ನು ಭಾರತಕ್ಕೆ ಕೊಡುಗೆ ನೀಡಲಾಗುವುದೇ ಎಂದು ಓಟಿಸ್ ಅವರನ್ನು ಪ್ರಶ್ನಿಸಿದಾಗ, ಬಡವರ ಅಭಿವೃದ್ಧಿಗೆ ಹಣಮೀಸಲಾತಿಯನ್ನು ಹೆಚ್ಚಿಸುವಂತೆ ಮತ್ತು ಗಾಂಧಿಯ ಅಹಿಂಸಾ ತತ್ವದ ಉತ್ತೇಜನಕ್ಕೆ 78 ರಾಷ್ಟ್ರಗಳಿಗೆ ಗಾಂಧಿ ಪರಿಕರಗಳ ಪ್ರವಾಸ ಏರ್ಪಡಿಸುವಂತೆ ತಾವು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಮಂಡಿಸಿದ್ದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಂಕಾ : 41 ಎಲ್‌ಟಿಟಿಇ ಉಗ್ರರ ಬಲಿ
ಅಫ್ಘಾನ್‌ಗೆ ಸೇನೆ ರವಾನೆ: ಬಾನ್ ಸ್ವಾಗತ
ಚಿಂಪಾಂಜಿ ಹೋಲಿಕೆಗೆ ಕ್ಷಮೆ ಕೋರಿದ ಬಿಬಿಸಿ ವಾಚಕ
ಜರ್ದಾರಿಗೆ 24 ಗಂಟೆ ಗಡು ನೀಡಿದ ಅಮೆರಿಕ
ಉ.ಕೊರಿಯ ರಾಕೆಟ್‌ಗೆ ಶೂಟ್: ಜಪಾನ್ ಎಚ್ಚರಿಕೆ
ಪಾಕ್ ಸೇನಾಡಳಿತ ವಶ ಸಾಧ್ಯತೆ ಶೂನ್ಯ: ಷರೀಫ್