ಡ್ಯಾನಿ ಬೊಯ್ಲೆ ನಿರ್ದೇಶನದ ಆಸ್ಕರ್ ವಿಜೇತ ಚಿತ್ರ ಸ್ಲಮ್ ಡಾಗ್ ಮಿಲಿಯನೇರ್ನಲ್ಲಿ ಲತಿಕಾ ಪಾತ್ರದಲ್ಲಿ ಮಿಂಚಿದ ಭಾರತೀಯ ನಟಿ ಫ್ರೀಡಾ ಪಿಂಟೊ ಜೇಮ್ಸ್ ಬಾಂಡ್ ಚಿತ್ರವೊಂದರಲ್ಲಿ ಬ್ರಿಟನ್ ನಟ ಡೇನಿಯಲ್ ಕ್ರೇಗ್ ವಿರುದ್ಧ ಬಾಂಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಪತ್ತೇದಾರಿ ಚಿತ್ರಕ್ಕಾಗಿ ಸ್ಕ್ರೀನ್ ಪರೀಕ್ಷೆಗೆ ಫ್ರೀಡಾ ಅವರನ್ನು ಆಹ್ವಾನಿಸಲಾಗಿದೆ. ಕ್ವಾಂಟಮ್ ಆಫ್ ಸೊಲೇಸ್ ಚಿತ್ರೀಕರಣದ ಸಂದರ್ಭದಲ್ಲಿ ಫ್ರೀಡಾ ಬಾಂಡ್ ತಂಡದ ಗಮನಸೆಳೆದಿದ್ದಳು. ಆದರೆ ಸೀಕ್ರೆಟ್ ಏಜೆಂಟ್ನ ಪ್ರೇಮಾಸಕ್ತಿಯ ಭಾಗವಾಗಿ ನಟಿಸಲು ಅವಳು ತುಂಬ ಚಿಕ್ಕವಳಾಗಿದ್ದಳು. ಈಗ ಸೋಜಿಗವೆನ್ನುವಂತೆ ಯುವತಿಯಾಗಿ ವಿಕಸಿಸಿದ್ದು, ಡೇನಿಯಲ್ ಕ್ರೇಗ್ ತೋಳುಗಳಿಗೆ ಸೂಕ್ತವಾಗಿ ಹೊಂದುತ್ತಾಳೆಂದು ಬ್ರಿಟನ್ ನಿಯತಕಾಲಿಕ ಸನ್ಗೆ ಮೂಲವೊಂದು ಹೇಳಿದೆ. ಮುಂದಿನ ಚಿತ್ರದ ಚುಕ್ಕಾಣಿಯನ್ನು ಹಿಡಿಯಲು ಡ್ಯಾನಿ ಬೋಯ್ಲೆ ಆದ್ಯತೆ ಹೊಂದಿದ್ದು, ಫ್ರೀಡಾ ಸ್ಟಾರಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶಗಳು ಹೆಚ್ಚಿವೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ, ನಿರ್ದೇಶಕ ವೂಡಿ ಅಲೆನ್ ಕೂಡ ತಮ್ಮ ಹೊಸ ಚಿತ್ರಕ್ಕೆ ಫ್ರೀಡಾ ಸಹಿ ಹಾಕಿಸಿಕೊಂಡಿದ್ದಾರೆ. ಫ್ರೀಡಾ ಪಿಂಟೊ ಕೀರ್ತಿಯ ಶಿಖರಕ್ಕೆ ಏರಿದಷ್ಟು ವೇಗವಾಗಿ ಇತ್ತೀಚಿನ ಸಿನೆಮಾ ಇತಿಹಾಸದಲ್ಲಿ ಯಾರೊಬ್ಬರೂ ಏರಿಲ್ಲವೆಂದು ಹೇಳಲಾಗಿದೆ. |