ವಕೀಲರ ಬೃಹತ್ ಜಾಥಾಗೆ ಉತ್ತೇಜನ ನೀಡುವಲ್ಲಿ ಸಕ್ರಿಯ ಪಾತ್ರವಹಿಸಿದ ಜಾಂಗ್ ಮೀಡಿಯ ಗ್ರೂಪ್ ಮಾಲೀಕತ್ವದ ಜಿಯೊ ಟಿವಿಯ ಮೇಲೆ ಪಾಕಿಸ್ತಾನ ಗದಾಪ್ರಹಾರ ಮಾಡಿದೆ. ಜಿಯೊ ಟಿವಿ ಪ್ರಸಾರವನ್ನು ಪಾಕಿಸ್ತಾನದಾದ್ಯಂತ ಅನೇಕ ನಗರಗಳಲ್ಲಿ ಸರ್ಕಾರ ಸ್ಥಗಿತಗೊಳಿಸಿದೆ.
ಪಿಪಿಪಿ ಸರ್ಕಾರ, ರಾವಲ್ಪಿಂಡಿ, ಇಸ್ಲಾಮಾಬಾದ್, ಲಾಹೋರ್ ಮತ್ತಿತರ ನಗರಗಳ ಕೇಬಲ್ ನಿರ್ವಾಹಕರಿಗೆ ಜಿಯೊ ಟಿವಿ ಪ್ರಸಾರ ಬಂದ್ ಮಾಡುವಂತೆ ಆದೇಶಿಸಿರುವುದಾಗಿ ಖಾಸಗಿ ಟೆಲಿವಿಷನ್ ಚಾನೆಲ್ ಆರೋಪಿಸಿದೆ.
ಗುರುವಾರದಿಂದ ವಕೀಲರನ್ನು ಮತ್ತು ಪ್ರತಿಪಕ್ಷದ ಕಾರ್ಯಕರ್ತರನ್ನು ಬಂಧಿಸಬೇಕೆಂಬ ಆದೇಶ ಉಲ್ಲಂಘಿಸಿದ ಪೊಲೀಸ್ ಸೂಪರಿಂಟೆಂಡೆಂಟ್ ಕ್ಲಿಪ್‌ಗಳನ್ನು ಪ್ರಸಾರ ಮಾಡಿ, ಆತ್ಮಸಾಕ್ಷಿಯ ಕರೆ ಕರ್ತವ್ಯದ ಕರೆಗಿಂತ ಮಿಗಿಲು ಎಂದು ಬಣ್ಣಿಸುತ್ತಾ ಜಿಯೊ ಟಿವಿ ಕಾಮೆಂಟರಿ ನೀಡಿತ್ತು. |