ಅಮೆರಿಕದ ಪ್ಲೋರಿಡಾ ರಾಜ್ಯದಲ್ಲಿ ಕೊಳಕು ಪರಿಸರದಲ್ಲಿ ಸೆರೆಯಲ್ಲಿಟ್ಟಿರುವ ಚಿಂಪಾಂಜಿ ಮತ್ತಿತರ ಮರ್ಕಟಗಳನ್ನು ಬಂಧಮುಕ್ತಗೊಳಿಸುವಂತೆ ಬೇವಾಚ್ ಖ್ಯಾತಿಯ ನಟಿ ಪಮೇಲಾ ಆಂಡರ್‌ಸನ್ ಅಭಿಯಾನ ನಡೆಸಿದ್ದಾರೆ. ಪ್ರಾಣಿ ಹಕ್ಕು ಆಂದೋಳನಕಾರರ ಜತೆ ಕೈಗೂಡಿಸಿರುವ ಆಂಡರ್‌ಸನ್ ಫ್ಲೋರಿಡಾ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದು, ರಾಜ್ಯದ ರಸ್ತೆಯ ಬದಿಯ ಮೃಗಾಲಯಗಳಲ್ಲಿ ಚಿಂಪಾಂಜಿ ಮತ್ತಿತರ ಪ್ರಾಣಿಗಳನ್ನು ಅಸಮರ್ಪಕ ರೀತಿಯಲ್ಲಿ ಕೂಡಿಹಾಕಲಾಗಿದೆಯೆಂದು ದೂರಿದ್ದಾರೆಂದು ಕಾಂಟಾಕ್ಟ್ ಮ‌್ಯೂಸಿಕ್.ಕಾಂ ವರದಿ ಮಾಡಿದೆ.
ಕನೆಕ್ಟಿಕಟ್‌ನಲ್ಲಿ ಚಿಂಪಾಂಜಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿದ್ದರಿಂದ ಮಹಿಳೆ ಅಂಕವೈಕಲ್ಯಕ್ಕೊಳಗಾದ ಘಟನೆಯನ್ನು ನೆನಪಿಸಿ, ಹತಾಶ ಸ್ಥಿತಿಯಲ್ಲಿರುವ ಪ್ರಾಣಿಗಳು ಅಂತಹ ದಾಳಿ ಮಾಡುವುದು ಸಹಜವೆಂದು ಹೇಳಿದ್ದಾರೆ. ಪ್ರಾಣಿಗಳಿಗೆ ನ್ಯಾಯಯುತ ಆರೈಕೆ ಮಾಡುವ(ಪೆಟಾ)ದ ಕಾಯಂ ಪ್ರಚಾರಕಿಯಾದ ಆಂಡರ್‌ಸನ್, ಫ್ಲೋರಿಡಾದಲ್ಲಿ ಬೃಹತ್ ಮರ್ಕಟಗಳು ಕೊಳಕು ಪರಿಸರದಲ್ಲಿ ತೀವ್ರ ಹತಾಶ ಸ್ಥಿತಿಯಲ್ಲಿದ್ದು, ಇದೇ ರೀತಿಯ ದುರಂತ ಸಂಭವಿಸಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ.
ಫ್ಲೋರಿಡಾದ ರಸ್ತೆಬದಿಯ ಮೃಗಾಲಯಗಳಿಂದ ಚಿಂಪಾಂಜಿಗಳನ್ನು ಬಂಧಮುಕ್ತಗೊಳಿಸಿ ಅವು ತಮ್ಮ ಉಳಿದ ಜೀವನವನ್ನು ಅನುಮೋದಿತ ಪ್ರಾಣಿಧಾಮಗಳಲ್ಲಿ ಸೂಕ್ತ ಪರಿಸರದಲ್ಲಿ ಕಳೆಯುವಂತಾಗಬೇಕು ಎಂದು ಹೇಳಿದ್ದಾರೆ. ಪ್ರಾಣಿ ಹಕ್ಕು ಪ್ರತಿಷ್ಠಾನದ 20 ವಾರ್ಷಿಕೋತ್ಸವ ಆಚರಣೆ ಸಲುವಾಗಿ ಪಮೇಲಾ ಫ್ಲೋರಿಡಾಗೆ ಆಗಮಿಸಿದ್ದಾರೆ. |