ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ನಡುವೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಎರಡು ವಿರೋಧಿ ಶಿಬಿರಗಳ ನಡುವೆ ಉದ್ವಿಗ್ನತೆ ಶಮನಕ್ಕೆ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮತ್ತು ಅವರ ಮುಖ್ಯ ರಾಜಕೀಯ ಎದುರಾಳಿ ನವಾಜ್ ಷರೀಫ್ ಅವರಿಗೆ ಖಾಸಗಿ ಕರೆಗಳನ್ನು ಮಾಡಿ ಬಿಕ್ಕಟ್ಟು ಶಮನಕ್ಕೆ ಚರ್ಚಿಸಿದ್ದಾರೆ. ಉಗ್ರವಾದದ ವಿರುದ್ಧ ಕಠಿಣ ಹೋರಾಟ ಮಾಡುವಾಗ ಪಾಕ್‌ನಲ್ಲಿ ಮತ್ತೊಮ್ಮೆ ರಾಜಕೀಯ ಅಸ್ಥಿರತೆ ಮೂಡಿಸುವುದು ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ಕ್ಲಿಂಟನ್ ಹೇಳಿದ್ದಾರೆ. |