ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನವಾಜ್ ನೇತೃತ್ವದಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನವಾಜ್ ನೇತೃತ್ವದಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಷರೀಫ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಗಿ ಭದ್ರತೆಯೊಂದಿಗೆ ಹೊರಬಂದಿದ್ದು ಪ್ರತಿಭಟನೆ ನೇತೃತ್ವ ವಹಿಸಿದ್ದಾರೆ.

ನವಾಜ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ತಡೆಯುವಲ್ಲಿ ಆಡಳಿತಾರೂಢ ಸರ್ಕಾರ ಸಾಕಷ್ಟು ಸರ್ಕಸ್ ಮಾಡಿತ್ತಾದರೂ ರಾಲಿಯನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ನೀವೆ ನೋಡುತ್ತಿದ್ದೀರಿ ಇಡೀ ದೇಶವೇ ಪೊಲೀಸರ ರಾಜ್ಯವಾಗುತ್ತಿದೆ ಎಂದು ಷರೀಫ್ ಗಂಭೀರವಾಗಿ ಆರೋಪಿಸಿದರು.

ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದು, ಆ ಕಾರಣಕ್ಕಾಗಿ ಎಲ್ಲಾ ಕಾನೂನು ಬಾಹಿರ ತಂತ್ರಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಲಾಹೋರ್‌ನ ಮನೆಯ ಮುಂಭಾಗ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು.

ನಾವು ಯಾವುದೇ ಕಾರಣಕ್ಕೂ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಗುಡುಗಿದ ಅವರು, ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರಿಸಿದ್ದು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು. ಈ ಸಂದರ್ಭದಲ್ಲಿ ಪಿಎಂಎಲ್‌ಎನ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸುವ ಮೂಲಕ ಪಾಕ್‌ನಲ್ಲಿ ರಾಜಕೀಯ ಅಸ್ಥಿರತೆಗೆ ವೇದಿಕೆ ಸಿದ್ದಗೊಂಡಂತಾಗಿದೆ.

ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದ ಷರೀಫ್, ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನದಲ್ಲಿ ಉದ್ವಿಗ್ನತೆ ಶಮನಕ್ಕೆ ಹಿಲರಿ ಮಾತುಕತೆ
ಶೆರಿ ರೆಹ್ಮಾನ್ ರಾಜೀನಾಮೆಗೆ ಅಸ್ತು
ಷರೀಫ್ ಗೃಹ ಬಂಧನಕ್ಕೆ ಪಾಕ್ ಆದೇಶ
ಚಿಂಪಾಂಜಿಗಳ ಬಂಧಮುಕ್ತಿಗೆ ಪಮೇಲಾ ಕರೆ
ಜಿಯೊ ಟಿವಿ ಪ್ರಸಾರ ಪಾಕ್‌ನಲ್ಲಿ ಬಂದ್
ಲಂಕಾದಲ್ಲಿ ರಾಜಕೀಯ ಪರಿಹಾರಕ್ಕೆ ಹಿಲರಿ ಕರೆ