ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಾಡೆನ್ ಹಿಂದು ಕುಶ್ ಪರ್ವತ ಪ್ರದೇಶದಲ್ಲಿ: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಡೆನ್ ಹಿಂದು ಕುಶ್ ಪರ್ವತ ಪ್ರದೇಶದಲ್ಲಿ: ವರದಿ
ಅಲ್ ಖಾಯಿದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜಾಡನ್ನು ಅಮೆರಿಕ ಪತ್ತೆಹಚ್ಚಿದೆಯೆಂದು ಹೇಳಲಾಗಿದ್ದು, ಪಾಕಿಸ್ತಾನದ ನಿಸರ್ಗರಮಣೀಯ ಚಿತ್ರಾಲ್ ಪ್ರದೇಶದ ಅಭೇದ್ಯ ಹಿಂದುಕುಶ್ ಪರ್ವತಗಳಲ್ಲಿ ಲಾಡೆನ್ ಅಡಗಿದ್ದಾನೆಂದು ಮಾಧ್ಯಮದ ವರದಿ ತಿಳಿಸಿದೆ.

ಅಮೆರಿಕ ಅದನ್ನು ಅಧಿಕೃತವಾಗಿ ಹೇಳದಿದ್ದರೂ, 9/11 ಭಯೋತ್ಪಾದನೆ ಸೂತ್ರಧಾರ ಲಾಡೆನ್‌ಗಾಗಿ ಚಿತ್ರಾಲ್‌ನ ಬೆಟ್ಟಗಳಲ್ಲಿ ಮತ್ತು ಕಣಿವೆಗಳಲ್ಲಿ ಭೇಟೆ ಆರಂಭಿಸಲಾಗಿದೆ ಎಂದು ನ್ಯೂಯಾರ್ಕ್ ಡೇಲಿ ನ್ಯೂಸ್ ವರದಿ ಮಾಡಿದೆ. ಹೊರಗಿನವರಿಗೆ ಈ ಪ್ರದೇಶವನ್ನು ಮುಚ್ಚಲಾಗಿದ್ದು, ಅಮೆರಿಕದ ಗೂಢಚಾರ ಡ್ರೋನ್‌ಗಳು ಅಲ್ಲಿ ನಿಯಮಿತವಾಗಿ ಶೋಧ ನಡೆಸುತ್ತಿವೆಯೆಂದು ವರದಿ ಹೇಳಿದೆ.

ಚಿತ್ರಾಲ್ ಪ್ರದೇಶದ ಹಿಂದು ಕುಶ್ ಪರ್ವತಗಳು ಬಿನ್ ಲಾಡೆನ್ ಅಡಗುತಾಣವೆಂದು ಕಣ್ಣಿಡಲಾಗಿರುವ ಬಗ್ಗೆ ಅಮೆರಿಕ ಮತ್ತು ವಿದೇಶದ 6 ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಾಕ್ಷ್ಯಾಧಾರದ ಸುದೀರ್ಘ ಪರಾಮರ್ಶೆ, 9/11ರಿಂದೀಚೆಗೆ ಸಿಕ್ಕಿರುವ ಬಿನ್ ಲಾಡೆನ್ ಟೇಪ್‌ಗಳು, ಅಲ್ ಖಾಯಿದಾ ಕುರಿತು ಹತ್ತಾರು ತಜ್ಞರ ಜತೆ ಸಂದರ್ಶನದ ಬಳಿಕ ವಿಸ್ತಾರ ಪರ್ವತಗಳು ಒಸಾಮಾನ ಸಂಭವನೀಯ ಅಡಗುತಾಣವೆಂದು ವರದಿ ತಿಳಿಸಿದೆ. ಡ್ರೋನ್ ವಿಮಾನಗಳು ಚಿತ್ರಾಲ್ ಪ್ರದೇಶದ ಮೇಲೆ ಹಾರಾಡುವುದನ್ನು ಕಳೆದ ಬೇಸಿಗೆಯಲ್ಲಿ ಪತ್ತೆಹಚ್ಚಲಾಯಿತು. ಫೆ.2ರಂದು ಪುನಃ ಅವು ಕಾಣಿಸಿಕೊಂಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಡಿಕೆ-ಈಡೇರಿಕೆ: 'ಲಾಂಗ್ ಮಾರ್ಚ್‌‌' ಪ್ರತಿಭಟನೆಗೆ ಷರೀಫ್ ತೆರೆ
ಲಂಕಾ: ಸೇನಾ ಕಾರ್ಯಾಚರಣೆಗೆ 57 ಉಗ್ರರ ಬಲಿ
ಅಪ್ಘಾನ್: ಐದು ಉಗ್ರರ ಬಲಿ
ನವಾಜ್ ನೇತೃತ್ವದಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಪಾಕಿಸ್ತಾನದಲ್ಲಿ ಉದ್ವಿಗ್ನತೆ ಶಮನಕ್ಕೆ ಹಿಲರಿ ಮಾತುಕತೆ
ಶೆರಿ ರೆಹ್ಮಾನ್ ರಾಜೀನಾಮೆಗೆ ಅಸ್ತು