ಗರ್ಭಕೊರಳಿನ ಕ್ಯಾನ್ಸರ್‌ಗೆ ತುತ್ತಾಗಿರುವ ರಿಯಾಲಿಟಿ ಟಿವಿ ನಟಿ ಜೇಡ್ ಗೂಡಿ ಸಾವುಬದುಕಿನ ಹೋರಾಟದಲ್ಲಿದ್ದು, ಅವಳ ಪರಿಸ್ಥಿತಿ ತೀವ್ರ ಹದಗೆಟ್ಟಿಯೆಂದು ನಿಕಟ ಸ್ನೇಹಿತೆಯೊಬ್ಬರು ಹೇಳಿದ್ದಾರೆ.
ತೀರಾ ದುರ್ಬಲತೆ ಮತ್ತು ನಿಶ್ಯಕ್ತಿಗೀಡಾದ ಆಕೆ ಸೋಮವಾರದವರೆಗೆ ಬದುಕುವ ನಿರೀಕ್ಷೆಯಿಲ್ಲ ಎಂದು ಹೇಳಲಾಗಿದೆ. 'ಅವಳು ಮರಣಶಯ್ಯೆಯಲ್ಲಿದ್ದು ಕ್ಷಣಗಣನೆ ಆರಂಭವಾಗಿದೆ. ರಾತ್ರೋರಾತ್ರಿ ಅವಳ ಪರಿಸ್ಥಿತಿ ಹದಗಟ್ಟಿದೆ. ತೀರಾ ದುರ್ಬಲಳಾದ ಆಕೆ ಬಿಳಿಚಿಕೊಂಡಿದ್ದು, ಸಾವಿಗೆ ಸಮೀಪದಲ್ಲಿದ್ದಾಳೆಂದು' ಸ್ನೇಹಿತೆ ಹೇಳಿದ್ದಾಳೆ. ನಿದ್ರೆಮಾಡಿದರೆ ಪುನಃ ಎಚ್ಚರವಾಗುವುದಿಲ್ಲ ಎಂಬ ಭೀತಿ ಆಕೆಯನ್ನು ಆವರಿಸಿದೆ. ಸಾವು ಹತ್ತಿರ ಬರುತ್ತಿದೆಯೆಂದು ಕಣ್ಣೀರ ಧಾರೆ ಹರಿಸುತ್ತಾಳೆಂದು ಸ್ನೇಹಿತೆ ಹೇಳಿದ್ದಾಳೆ.
ಕಾಲ ಸರಿಯುವುದರೊಂದಿಗೆ, ತನ್ನ ಅಂತ್ಯಕ್ರಿಯೆಯನ್ನು ಗೂಡಿ ಯೋಜಿಸಿದ್ದು, ಸಾಂಪ್ರದಾಯಿಕ ಸಮಾಧಿಯನ್ನು ಆಕೆ ಬಯಸಿದ್ದಾಳೆ ಮತ್ತು ತನ್ನ ನಿವಾಸದ ಸಮೀಪದ ಚರ್ಚ್‌ನಲ್ಲಿ ಕ್ರಿಯಾವಿಧಿ ನಡೆಸಬೇಕೆಂದು ಹೇಳಿದ್ದಾಳೆ. ತಾನು ಬಿಗ್ ಬ್ರದರ್‌ನಲ್ಲಿ ಖ್ಯಾತಿ ಗಳಿಸಿದ ಬಳಿಕ ಕಳೆದ 7 ವರ್ಷಗಳಿಂದ ಹೇಗೆ ಬದುಕಿದೆ ಎನ್ನುವುದನ್ನು ಅಂತ್ಯಕ್ರಿಯೆ ಬಿಂಬಿಸಬೇಕೆಂದು ಅವಳು ತಿಳಿಸಿದ್ದಾಳೆ.
|