ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 10 ಜನರು ಅಸುನೀಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ರಾವಲ್ಪಿಂಡಿಯ ಪಿರ್ ವಡಾಯಿ ಚೌಕ್‌ನಲ್ಲಿ ಕಿಕ್ಕಿರಿದ ಬಸ್ಸೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿದಂತೆ 10 ಜನರು ದಾಳಿಯಲ್ಲಿ ಅಸುನೀಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಅವರಲ್ಲಿ ನಾಲ್ಕು ಜನರು ಸ್ಥಿತಿ ಚಿಂತಾಜನಕವಾಗಿದೆ. ಶಂಕಿತ ಆತ್ಮಾಹುತಿ ಬಾಂಬರ್ ರುಂಡವು ಸ್ಫೋಟದ ಸ್ಥಳದಲ್ಲಿ ಪತ್ತೆಯಾಗಿದೆಯೆಂದು ಆಜ್ ಟಿವಿ ಚಾನೆಲ್ ವರದಿ ಮಾಡಿದೆ.

ಬಾಂಬರ್ ತನ್ನ ಆತ್ಮಾಹುತಿ ಜಾಕೆಟ್‌ನಲ್ಲಿ ಪ್ಯಾಕ್ ಮಾಡಿದ್ದ ಬಾಲ್ ಬೇರಿಂಗ್‌ಗಳು ಅನೇಕ ಮಂದಿ ದುರ್ದೈವಿಗಳಿಗೆ ಬಡಿದಿದ್ದು, ಹಲವಾರು ವಾಹನಗಳು ಸ್ಫೋಟದಲ್ಲಿ ತೀವ್ರವಾಗಿ ಜಖಂಗೊಂಡಿವೆ.

ವಕೀಲರು ಮತ್ತು ರಾಜಕೀಯ ಪಕ್ಷಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸೇರಿದ್ದ ರಾಜಕೀಯ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಗುರಿಇರಿಸಲು ಆತ್ಮಾಹುತಿ ಬಾಂಬರ್‌ಗೆ ಸಾಧ್ಯವಾಗಿದ್ದರೆ ವ್ಯಾಪಕ ವಿನಾಶ ಸೃಷ್ಟಿಯಾಗುತ್ತಿತ್ತು ಎಂದು ಒಳಾಡಳಿತ ಸಚಿವಾಲಯದ ಮುಖ್ಯಸ್ಥ ರೆಹ್ಮಾನ್ ಮಲಿಕ್ ವರದಿಗಾರರಿಗೆ ತಿಳಿಸಿದರು.

ಬಾಂಬರ್‌ನ ಸ್ಫೋಟಕಗಳು ಉದ್ದೇಶಿತ ಗುರಿಗೆ ದಾಳಿಮಾಡುವ ಮುನ್ನವೇ ಅಕಾಲಿಕವಾಗಿ ಸ್ಫೋಟಿಸಿದೆಯೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದು, ಸ್ಫೋಟದ ಸ್ಥಳದಲ್ಲಿ ಸುಳಿವಿಗಾಗಿ ಹುಡುಕಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯೆಮೆನ್: ಸ್ಫೋಟಕ್ಕೆ 4 ಬಲಿ
ಪಾಕ್‌ಗೆ ಭಾರತದ ನೂತನ ರಾಯಭಾರಿ
ಜರ್ದಾರಿ ಅತ್ಯಂತ ದುರ್ಬಲ ಅಧ್ಯಕ್ಷ: ವಿಶ್ಲೇಷಕರ ಟೀಕೆ
ಸುಪ್ರೀಂ ನ್ಯಾಯಪೀಠಕ್ಕೆ ಇಫ್ತಿಕರ್ ಪುನರಾಗಮನ
ಸಾವಿನ ಕ್ಷಣಗಣನೆಯಲ್ಲಿ 'ಜೇಡ್ ಗೂಡಿ'
ಬುಷ್‌‌ಗೆ 'ಬೇಡಿ' ಹಾಕಲು ಕೆನಡಾದಲ್ಲಿ ಒತ್ತಾಯ