ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌‌ಟಿಟಿಇಯಿಂದ ರಾಸಾಯನಿಕ ಅಸ್ತ್ರ ಬಳಕೆ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌‌ಟಿಟಿಇಯಿಂದ ರಾಸಾಯನಿಕ ಅಸ್ತ್ರ ಬಳಕೆ ?
ಶ್ರೀಲಂಕಾ ಸೇನೆ ಎಲ್‌ಟಿಟಿಇ ಬಂಡುಕೋರರ ವಿರುದ್ಧ ನಿರ್ಣಾಯಕ ಪೆಟ್ಟು ನೀಡಲು ಸಿದ್ಧತೆ ನಡೆಸಿರುವ ನಡುವೆ, ಮುಲ್ಲೈತಿವು ಜಿಲ್ಲೆಯಲ್ಲಿ ರಾಸಾಯನಿಕಗೊಬ್ಬರದ ಉಗ್ರಾಣವನ್ನು ಮಿಲಿಟರಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಯುದ್ಧವಲಯದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿರುವ ಬಗ್ಗೆ ಊಹಾಪೋಹಕ್ಕೆ ಎಡೆಮಾಡಿದೆ.

ಜರ್ಜರಿತ ಉತ್ತರ ಶ್ರೀಲಂಕಾದಲ್ಲಿ ತಮಿಳು ಬಂಡುಕೋರರ ಉಳಿದ ಪ್ರದೇಶಗಳ ವಶಕ್ಕೆ ಸೇನೆ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕನಿಷ್ಠ 14 ಎಲ್‌ಟಿಟಿಇ ಗೆರಿಲ್ಲಾಗಳು ಮತ್ತು ಮ‌ೂವರು ನಾಗರಿಕರು ಹತರಾಗಿದ್ದಾರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಮುಲೈತಿವು ಜಿಲ್ಲೆಯ ಉದಯರಕಟ್ಟುವಿನಲ್ಲಿ 8 ಸಿನ್ಹಾ ತುಕಡಿಗೆ ಸೇರಿದ ಪಡೆಗಳು ರಾಸಾಯನಿಕಗೊಬ್ಬರದ ಉಗ್ರಾಣವನ್ನು ಪತ್ತೆಹಚ್ಚಿದೆ ಎಂದು ಸಚಿವಾಲಯ ಹೇಳಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ರಾಸಾಯನಿಕವನ್ನು ಭಯೋತ್ಪಾದಕ ಅಸ್ತ್ರವಾಗಿ ಬಳಸುವುದನ್ನು ಅರಿಯುವ ಮುಂಚೆಯೇ ರಾಸಾಯನಿಕವನ್ನು ಸ್ಫೋಟಕವಾಗಿ ಬಳಸುವುದನ್ನು ಎಲ್‌ಟಿಟಿಇ ಕರಗತ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಏತನ್ಮಧ್ಯೆ, ಯುದ್ಧವಲಯದಲ್ಲಿ ಸಿಕ್ಕಿಬಿದ್ದ ನಾಗರಿಕರ ಗತಿ ಅಂತಾರಾಷ್ಟ್ರೀಯ ಕಳವಳದ ವಿಚಾರವಾಗಿದ್ದು, ಎಲ್‌ಟಿಟಿಇ ಗೆರಿಲ್ಲಾಗಳು ನಾಗರಿಕನ್ನು ಮಾನವ ಕವಚದಂತೆ ಬಳಸುತ್ತಿದೆಯೆಂದು ಸರ್ಕಾರ ಆರೋಪಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಯೆಮೆನ್: ಸ್ಫೋಟಕ್ಕೆ 4 ಬಲಿ
ಪಾಕ್‌ಗೆ ಭಾರತದ ನೂತನ ರಾಯಭಾರಿ
ಜರ್ದಾರಿ ಅತ್ಯಂತ ದುರ್ಬಲ ಅಧ್ಯಕ್ಷ: ವಿಶ್ಲೇಷಕರ ಟೀಕೆ
ಸುಪ್ರೀಂ ನ್ಯಾಯಪೀಠಕ್ಕೆ ಇಫ್ತಿಕರ್ ಪುನರಾಗಮನ
ಸಾವಿನ ಕ್ಷಣಗಣನೆಯಲ್ಲಿ 'ಜೇಡ್ ಗೂಡಿ'