ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಎ.ಕ್ಯೂ. ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ನಿಂತಿಲ್ಲ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಎ.ಕ್ಯೂ. ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ನಿಂತಿಲ್ಲ'
ಪಾಕಿಸ್ತಾನದ ಕಳಂಕಿತ ಅಣು ವಿಜ್ಞಾನಿ ಎ.ಕ್ಯೂ.ಖಾನ್ ಅವರ ಕಪ್ಪು ಪರಮಾಣು ಮಾರುಕಟ್ಟೆ ಇನ್ನೂ ಸಂಪೂರ್ಣವಾಗಿ ಮುಚ್ಚಿಲ್ಲ ಎಂದು ಅಮೆರಿಕದ ಸಂಸತ್ ಸದಸ್ಯರೊಬ್ಬರು ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ ಅಣುವಿಜ್ಞಾನಿ ಎ.ಕ್ಯೂ. ಖಾನ್ ಪರಮಾಣು ತಂತ್ರಜ್ಞಾನವನ್ನು ವಿದೇಶಗಳಿಗೆ ಮಾರಾಟ ಮಾಡುವ ಮ‌ೂಲಕ ಕುಖ್ಯಾತಿಗೆ ಗುರಿಯಾಗಿದ್ದರು. ಖಾನ್ ಪರಮಾಣು ಜಾಲವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆಯೆಂದು ಅಮೆರಿಕ ಹೇಳುತ್ತಿದ್ದರೂ ಅಮೆರಿಕದ ವಾದವನ್ನು ಅಮೆರಿಕ ಕಾಂಗ್ರೆಸೆ ಸದಸ್ಯೆ ಜೇನ್ ಹಾರ್ಮನ್ ಅಲ್ಲಗಳೆದಿದ್ದಾರೆ.

ಖಾನ್ ಅವರ ತನಿಖೆಗೆ ಅಮೆರಿಕದ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹಾಕಬೇಕೆಂದು ಕಳೆದ ವಾರ ಅಮೆರಿಕ ಕಾಂಗ್ರೆಸ್‌ನಲ್ಲಿ ಹಾರ್ಮನ್ ಶಾಸನ ಮಂಡಿಸಿದ್ದರು. ಎಂಎಸ್‌ಎನ್‌ಬಿಸಿ ಸುದ್ದಿ ಚಾನೆಲ್‌ ಜತೆ ಮಾತನಾಡುತ್ತಿದ್ದ ಅವರು, ಎ.ಕ್ಯೂ.ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ಮುಚ್ಚಲಾಗಿದೆಯೆಂಬ ಅಭಿಪ್ರಾಯವನ್ನು ಅಲ್ಲಗಳೆದರು.

ಕಳೆದ ಭಾನುವಾರ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಉಪಾಧ್ಯಕ್ಷ ಡಿಕ್ ಚೇನಿ ಎ.ಕ್ಯೂ. ಖಾನ್ ಪರಮಾಣು ಜಾಲವನ್ನು ಮುಚ್ಚುವಲ್ಲಿ ಬುಷ್ ಆಡಳಿತ ಯಶಸ್ವಿಯಾಗಿದೆಯೆಂದು ಹೇಳಿದ್ದರು.ಎ.ಕ್ಯೂ. ಖಾನ್ ಪರಮಾಣು ಜಾಲವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆಯೆಂಬ ವಾದವನ್ನು ತಾವು ಒಪ್ಪುವುದಿಲ್ಲ ಎಂದು ಹರ್ಮಾನ್ ಸಂದರ್ಶನದಲ್ಲಿ ಹೇಳಿದರು.

ಖಾನ್ ಅವರ ಜಾಲವುಗೋಪ್ಯ ಪರಮಾಣು ತಂತ್ರಜ್ಞಾನವನ್ನು ಇರಾನ್, ಉತ್ತರಕೊರಿಯ ಮತ್ತು ಸಿರಿಯಕ್ಕೆ ಮಾರಾಟ ಮಾಡಿದೆ. ಬ್ಯಾದಲ್ಲಿ ನಾವು ಖಾನ್ ಜಾಲವನ್ನು ಮುಚ್ಚಿದ್ದರೂ. ಇರಾನ್, ಉತ್ತರಕೊರಿಯಲ್ಲಿ ಖಾನ್ ಪ್ರಯತ್ನಗಳಿಂದ ಪರಮಾಣು ಜಾಲ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಹರ್ಮಾನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌‌ಟಿಟಿಇಯಿಂದ ರಾಸಾಯನಿಕ ಅಸ್ತ್ರ ಬಳಕೆ ?
ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಯೆಮೆನ್: ಸ್ಫೋಟಕ್ಕೆ 4 ಬಲಿ
ಪಾಕ್‌ಗೆ ಭಾರತದ ನೂತನ ರಾಯಭಾರಿ
ಜರ್ದಾರಿ ಅತ್ಯಂತ ದುರ್ಬಲ ಅಧ್ಯಕ್ಷ: ವಿಶ್ಲೇಷಕರ ಟೀಕೆ
ಸುಪ್ರೀಂ ನ್ಯಾಯಪೀಠಕ್ಕೆ ಇಫ್ತಿಕರ್ ಪುನರಾಗಮನ