ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಂಧಿ ವಸ್ತು ವಾಪಸಿಗೆ ಓಟಿಸ್ ಹೊಸ ವಕೀಲರ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ವಸ್ತು ವಾಪಸಿಗೆ ಓಟಿಸ್ ಹೊಸ ವಕೀಲರ ನೇಮಕ
ಮಹಾತ್ಮಾ ಗಾಂಧಿ ಖಾಸಗಿ ವಸ್ತುಗಳ ಮಾಲೀಕತ್ವದ ಮೇಲೆ ಹಕ್ಕುಪ್ರತಿಪಾದಿಸಿರುವ ಜೇಮ್ಸ್ ಓಟಿಸ್ ತಮ್ಮನ್ನು ಪ್ರತಿನಿಧಿಸಲು ನೂತನ ವಕೀಲರೊಬ್ಬರನ್ನು ನೇಮಕ ಮಾಡಿದ್ದಾರೆ.

ಹರಾಜಾದ ಗಾಂಧೀಜಿಯ ಐದು ಖಾಸಗಿ ವಸ್ತುಗಳನ್ನು ಓಟಿಸ್ ಪುನಃ ವಾಪಸ್ ಪಡೆಯಲು ಬಯಸಿದ್ದು, ಈ ವಸ್ತುಗಳನ್ನು ಹರಾಜಿನಲ್ಲಿ 1.8 ಮಿಲಿಯ ಡಾಲರ್‌ಗೆ ಮದ್ಯದ ದೊರೆ ವಿಜಯ ಮಲ್ಯ ಖರೀದಿಸಿದ್ದು, ಆಂಟಿಕೋರಂ ಹರಾಜುದಾರರ ಜತೆ ಸಂಪರ್ಕದಲ್ಲಿದ್ದರು. ತಾವು ಗಾಂಧೀ ವಸ್ತುಗಳನ್ನು ಹಿಂತಿರುಗಿಸುವಂತೆ ಹರಾಜುದಾರರಿಗೆ ಪತ್ರಬರೆಯುವುದಾಗಿ ತಿಳಿಸಿದ್ದ ಅವರ ಮಾಜಿ ಅಟಾರ್ನಿ ರವಿ ಬಾತ್ರಾ ಹಠಾತ್ತನೇ ರಾಜೀನಾಮೆ ಸಲ್ಲಿಸಿದ್ದಾರೆ.

ಹರಾಜುದಾರರ ಪ್ರತಿಕ್ರಿಯೆ ಆಧಾರದ ಮೇಲೆ ತಾವು ಕಾನೂನುಕ್ರಮ ಕೈಗೊಳ್ಳುವುದಾಗಿ ಬಾತ್ರಾ ತಿಳಿಸಿದ್ದರು.ಆದರೆ ಸೋಮವಾರ ಹಠಾತ್ತನೇ ಹೇಳಿಕೆಯೊಂದನ್ನು ನೀಡಿದ ಬಾತ್ರಾ, ಮಾ.5ರಂದು ತಾವು ವಹಿಸಿಕೊಂಡ ಓಟಿಸ್ ಅಟಾರ್ನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದರು.

ಆದರೆ ರಾಜೀನಾಮೆಗೆ ಯಾವುದೇ ಕಾರಣ ನೀಡಲು ನಿರಾಕರಿಸಿದ ಅವರು, ಅಟಾರ್ನಿ-ಕಕ್ಷಿದಾರರ ಗೋಪ್ಯತೆ ಎಂದು ತಿಳಿಸಿದ್ದರು. ಬಾತ್ರಾ ರಾಜೀನಾಮೆ ಕುರಿತು ಕೇಳಿದಾಗ, ತಮ್ಮನ್ನು ಥಾಮಸ್ ಕಿಸಾನೆ ವಕೀಲರಾಗಿ ಪ್ರತಿನಿಧಿಸುತ್ತಿದ್ದು,ನ್ಯೂಯಾರ್ಕ್ ಅಟಾರ್ನಿ ಜನರಲ್ ಕಚೇರಿಯನ್ನು ಅವರು ಸಂಪರ್ಕಿಸಲಿದ್ದಾರೆಂದು ನುಡಿದರು.

ದೆಹಲಿ ಹೈಕೋರ್ಟ್ ಹರಾಜಿಗೆ ತಡೆಯಾಜ್ಞೆ ನೀಡಿದ್ದರಿಂದ ನ್ಯಾಯ ಇಲಾಖೆಗೆ ಕಾನೂನಿನ ಕ್ರಮಗಳ ಬಗ್ಗೆ ತೀರ್ಪು ನೀಡಲು ಅವಕಾಶ ನೀಡುವುದಕ್ಕಾಗಿ ಗಾಂಧೀ ವಸ್ತುಗಳು ಹರಾಜಾಗಿದ್ದರೂ ಅದು ಹರಾಜುದಾರರ ಬಳಿಯಲ್ಲಿಯೇ ಇವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿ ಕ್ರಮ ಸಾಮರಸ್ಯಕ್ಕೆ ಮೊದಲ ಹೆಜ್ಜೆ: ಹಿಲರಿ
'ಎ.ಕ್ಯೂ. ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ನಿಂತಿಲ್ಲ'
ಎಲ್‌‌ಟಿಟಿಇಯಿಂದ ರಾಸಾಯನಿಕ ಅಸ್ತ್ರ ಬಳಕೆ ?
ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಯೆಮೆನ್: ಸ್ಫೋಟಕ್ಕೆ 4 ಬಲಿ
ಪಾಕ್‌ಗೆ ಭಾರತದ ನೂತನ ರಾಯಭಾರಿ