ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕದನವಿರಾಮ ಮನವಿಗೆ ಶ್ರೀಲಂಕಾ ನಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕದನವಿರಾಮ ಮನವಿಗೆ ಶ್ರೀಲಂಕಾ ನಕಾರ
ದ್ವೀಪದ ಆಂತರಿಕ ಯುದ್ಧಕ್ಕೆ ತಕ್ಷಣವೇ ಕದನವಿರಾಮ ಘೋಷಿಸಬೇಕೆಂಬ ಐರೋಪ್ಯ ಒಕ್ಕೂಟದ ಮನವಿಯನ್ನು ಶ್ರೀಲಂಕಾ ದೃಢವಾಗಿ ನಿರಾಕರಿಸಿದ್ದು, ಯಾವುದೇ ಒಪ್ಪಂದವು ಜರ್ಜರಿತರಾದ ತಮಿಳು ಬಂಡುಕೋರರ ಪುನರ್‌ಸಂಘಟನೆಗೆ ಅವಕಾಶ ನೀಡುತ್ತದೆಂದು ತಿಳಿಸಿದೆ.

ತಮಿಳು ನಾಗರಿಕರನ್ನು ರಕ್ಷಣಾ ಕವಚದಂತೆ ಎಲ್‌ಟಿಟಿಇ ಉಗ್ರರು ಬಳಸುತ್ತಿದ್ದಾರೆಂದು ಹೇಳಲಾದ ಉತ್ತರ ಸುರಕ್ಷಿತ ವಲಯಕ್ಕೆ ತುರ್ತು ಮಾನವೀಯ ನೆರವಿಗೆ ಅವಕಾಶ ನೀಡುವಂತೆ ಐರೋಪ್ಯ ಒಕ್ಕೂಟವು ಸರ್ಕಾರ ಮತ್ತು ತಮಿಳು ವ್ಯಾಘ್ರ ಬಂಡುಕೋರರಿಗೆ ಒತ್ತಾಯಿಸಿದೆ.

'ಕದನವಿರಾಮದಿಂದ ಎಲ್‌ಟಿಟಿಇ ಬೇಡಿಕೆಗಳಿಗೆ ಮಣಿಯುವುದನ್ನು ಬಿಟ್ಟರೆ ಬೇರೆ ಏನನ್ನು ಸಾಧಿಸಲು ಸಾಧ್ಯವಾಗುತ್ತದೆಂದು' ವಿದೇಶಾಂಗ ಕಾರ್ಯದರ್ಶಿ ಪಲೀತಾ ಕೊಹೋನಾ ಎಲ್‌ಟಿಟಿಯನ್ನು ಉಲ್ಲೇಖಿಸಿ ಪ್ರಶ್ನಿಸಿದರು.

'25 ವರ್ಷಗಳ ಆಂತರಿಕ ಯುದ್ಧದಲ್ಲಿ ಮಿಲಿಟರಿ ಜಯದ ಅಂಚಿನಲ್ಲಿದ್ದು, ಸೋಲಿನಿಂದ ತಪ್ಪಿಸಿಕೊಳ್ಳಲು ಎಲ್‌ಟಿಟಿಇ ಹತಾಶ ಕ್ರಮವಾಗಿ ನಾಗರಿಕರನ್ನು ಮಾನವ ಕವಚಗಳಂತೆ ಬಳಸುತ್ತಿದೆಯೆಂದು ಕೊಹೋನಾ ಆರೋಪಿಸಿದ್ದಾರೆ. ಅವರ ಸ್ವಂತ ಜನರನ್ನೇ ಒತ್ತೆಯಾಳಾಗಿ ಎಲ್‌ಟಿಟಿಇ ಇರಿಸಿಕೊಂಡಿದೆ. ಅಂತಾರಾಷ್ಟ್ರೀಯ ಸಮುದಾಯ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀಲಂಕಾ, ಕೊಲಂಬೋ, ಇಯು, ಎಲ್ಟಿಟಿಇ
ಮತ್ತಷ್ಟು
ಗಾಂಧಿ ವಸ್ತು ವಾಪಸಿಗೆ ಓಟಿಸ್ ಹೊಸ ವಕೀಲರ ನೇಮಕ
ಜರ್ದಾರಿ ಕ್ರಮ ಸಾಮರಸ್ಯಕ್ಕೆ ಮೊದಲ ಹೆಜ್ಜೆ: ಹಿಲರಿ
'ಎ.ಕ್ಯೂ. ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ನಿಂತಿಲ್ಲ'
ಎಲ್‌‌ಟಿಟಿಇಯಿಂದ ರಾಸಾಯನಿಕ ಅಸ್ತ್ರ ಬಳಕೆ ?
ರಾವಲ್ಪಿಂಡಿ: ಆತ್ಮಾಹುತಿ ದಾಳಿಗೆ 10 ಜನರ ಬಲಿ
ಯೆಮೆನ್: ಸ್ಫೋಟಕ್ಕೆ 4 ಬಲಿ