ಮಹಿಳಾ ಹಕ್ಕುಗಳ ಪರ ಹೋರಾಟಕ್ಕಾಗಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಮುಕ್ತರ್ ಮಾಯಿ ಈಗ ವಿವಾಹವಾಗಿದ್ದಾರೆ.
ಮುಕ್ತರ್ ಮಾಯಿ ಸೋದರನ ವಿರುದ್ಧ ವ್ಯಭಿಚಾರದ ಆರೋಪ ಹೊರಿಸಿದ ಗ್ರಾಮಸ್ಥರು, ಅದಕ್ಕೆ ಪ್ರತಿಯಾಗಿ ಶಿಕ್ಷೆ ವಿಧಿಸಿದ್ದು ಬಾಲಕನ ಅಕ್ಕನಿಗೆ. ಗ್ರಾಮದ ನಾಲ್ವರು ವ್ಯಕ್ತಿಗಳು ಮುಕ್ತಾರ್ ಮಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುವ ಮೂಲಕ ಸೋದರನ ವ್ಯಭಿಚಾರಕ್ಕೆ ಮುಯ್ಯಿ ತೀರಿಸಿಕೊಂಡರು. ಆದರೆ ಮುಕ್ತಾರ್ ಮಾಯಿ ಮನನೊಂದು ಸುಮ್ಮನೇ ಕೂಡಲಿಲ್ಲ. ಮಾನಾಪಮಾನಗಳಿಗೆ ಅಂಜದೇ ತಮ್ಮ ಮೇಲಿನ ಅತ್ಯಾಚಾರದ ವಿರುದ್ಧ ಸೆಟೆದುನಿಂತು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಹೋರಾಡಿದರು.
ಆಗಿನಿಂದ ಮುಕ್ತಾರ್ ಮಾಯಿ ಸ್ವದೇಶದಲ್ಲಿ ಮಹಿಳಾ ಹಕ್ಕುಗಳ ಛಾಂಪಿಯನ್ ಎನಿಸಿಕೊಂಡರು ಮತ್ತು ಅಂತಾರಾಷ್ಟ್ರೀಯವಾಗಿ ಗಮನಸೆಳೆದರು.ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾದ 6 ಮಂದಿ ಇನ್ನೂ ಕಸ್ಟಡಿಯಲ್ಲಿದ್ದು ಮರುವಿಚಾರಣೆ ಬಾಕಿವುಳಿದಿದೆ. ತಾನು ಮದುವೆಯಾಗುವುದು ಖಚಿತವಿಲ್ಲ ಎಂದು ಹೇಳಿದ್ದ ಮಾಯಿ ಭಾನುವಾರ ಇಸ್ಲಾಮಾಬಾದ್‌ನಲ್ಲಿ ಪೊಲೀಸ್ ಪೇಟೆ ನಾಸಿರ್ ಅಬ್ಬಾಸ್ ಗಾಬೋಲ್‌ನನ್ನು ವರಿಸಿದರು.
ಅತ್ಯಾಚಾರಕ್ಕೀಡಾದ ಬಳಿಕ ಅತ್ಯುತ್ತಮ ಮಾರಾಟವಾಗುತ್ತಿರುವ ಆತ್ಮಕಥೆ ಬರೆದಿರುವ ಮುಕ್ತಾರ್ ಮಾಯಿ ಶಾಲೆಯೊಂದನ್ನು ಮತ್ತು ಮಹಿಳಾ ಬಿಕ್ಕಟ್ಟು ಕೇಂದ್ರಗಳ ಸರಪಳಿಯನ್ನು ಪಾಕಿಸ್ತಾನದಲ್ಲಿ ತೆರೆದಿದ್ದಾರೆ. ತನ್ನ ಮೇಲೆ ಗ್ರಾಮಮಂಡಳಿಯ ಆದೇಶದ ಮೇಲೆ ಅತ್ಯಾಚಾರ ಮಾಡಿದ ಬಳಿಕ ಹೊರಪ್ರಪಂಚಕ್ಕೆ ಅದನ್ನು ಬಹಿರಂಗ ಮಾಡಿದ್ದರಿಂದ ವ್ಯಾಪಕ ಅಂತಾರಾಷ್ಟ್ರೀಯ ಬೆಂಬಲ ಸಿಕ್ಕಿತು.
2005ರಲ್ಲಿ ಗ್ಲಾಮರ್ ಮ್ಯಾಗಜಿನ್ ವಾಷಿಂಗ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ವರ್ಷದ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿತು. ಭಯಾನಕ ಹಿಂಸಾಚಾರದ ಮುಖದ ನಡುವೆ ಆಕೆ ತೋರಿದ ದಿಟ್ಟೆದೆ ಮತ್ತು ಆಶಾವಾದದ ಬಗ್ಗೆ ಮಾಯಿಯನ್ನು ಪ್ರಶಸ್ತಿಯಲ್ಲಿ ಹೊಗಳಾಯಿತು. |