ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸಂಗೀತದ ಅಬ್ಬರ-ಬಾರ್ ಮಾಲೀಕನಿಗೆ 5ವರ್ಷ ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಗೀತದ ಅಬ್ಬರ-ಬಾರ್ ಮಾಲೀಕನಿಗೆ 5ವರ್ಷ ಶಿಕ್ಷೆ
ಬಾರ್ಸಿಲೋನದ ಬಾರ್ ಮಾಲೀಕನೊಬ್ಬನಿಗೆ ಗಿವಿಗಡಚಿಕ್ಕುವ ಸಂಗೀತದ ಶಬ್ದದ ಮ‌ೂಲಕ ತಮ್ಮ ನೆರೆಹೊರೆಯವರಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ಐದೂವರೆ ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.

ಸ್ಪೇನ್‌ನಲ್ಲಿ ಇಂತಹ ಅಪರಾಧಕ್ಕೆ ಹಿಂದೆಂದೂ ವಿಧಿಸಿರದ ಕಠಿಣ ಶಿಕ್ಷೆ ಇದಾಗಿದೆ. ಲಾಸ್ ರಾಮಬ್ಲಾಸ್‌ನ ಡೊನೆಗಲ್ ಪಬ್‌ನ ಪಕ್ಕದಲ್ಲಿ ವಾಸಿಸುತ್ತಿದ್ದ ಮ‌ೂವರು ಕಿವಿಕೊರೆಯುವ ಸಂಗೀತದ ಶಬ್ದ ಕೇಳಿ ಹಗಲು, ರಾತ್ರಿ ಮಾನಸಿಕ ಯಾತನೆಗೆ ಗುರಿಯಾದರು. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 3 ಗಂಟೆವರೆಗೆ ಐದು ಧ್ವನಿವರ್ಧಕಗಳಿಂದ ಕಿವಿಗಪ್ಪಳಿಸುವ ಹಾಗೆ ಕಾನೂನಿನ ಮಿತಿಯನ್ನು ಮೀರಿ ಪರವಾನಗಿರಹಿತ ಸೌಂಡ್ ಸಿಸ್ಟಂನಿಂದ ಹರಿಸಿದ ಸಂಗೀತ ಸುಧೆಯಿಂದ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಕಂಗಾಲಾದರು.

ಸಂಗೀತದ ಶಬ್ದ ಕುರಿತಂತೆ ಅಹಿಜಾಡೊಗೆ 17,000 ಯ‌ೂರೊಗಿಂತ ಹೆಚ್ಚು ದಂಡ ವಿಧಿಸಲಾಗಿದ್ದು, ಸಂಗೀತದ ಶಬ್ದ ಇಳಿಸುವಂತೆ ಮುಂಚೆ ನೀಡಿದ್ದ ಸೂಚನೆಗೆ ಕಿವಿಗೊಟ್ಟಿರಲಿಲ್ಲವೆನ್ನಲಾಗಿದೆ. ಈ ಸಂಗೀತದ ಶಬ್ದವು ಮುಂಜಾನೆಯಿಂದ ಮಧ್ಯರಾತ್ರಿ ನಂತರವೂ ಕಿವಿಗೆ ಅಹಿತಕಾರಿಯಾಗಿದ್ದು, ಚಿತ್ರಹಿಂಸೆಯ ರೀತಿ ಎಂದು ನ್ಯಾಯಾಧೀಶರು ಬಣ್ಣಿಸಿದ್ದಾರೆ. ನೆರಮನೆಯವನೊಬ್ಬ ಸಂಗೀತದ ಶಬ್ದ ಆಲಿಸಿ, ಆಲಿಸಿ ಖಿನ್ನತೆ, ಉನ್ಮಾದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
9 ಜನರ ಜೀವವುಳಿಸಿದ ಮೃತ ಭಾರತೀಯ ಮಹಿಳೆ
ಅತ್ಯಾಚಾರದ ಬಲಿಪಶು ಮುಕ್ತರ್ ಮಾಯಿ ಹಸೆಮಣೆಗೆ
ಕದನವಿರಾಮ ಮನವಿಗೆ ಶ್ರೀಲಂಕಾ ನಕಾರ
ಗಾಂಧಿ ವಸ್ತು ವಾಪಸಿಗೆ ಓಟಿಸ್ ಹೊಸ ವಕೀಲರ ನೇಮಕ
ಜರ್ದಾರಿ ಕ್ರಮ ಸಾಮರಸ್ಯಕ್ಕೆ ಮೊದಲ ಹೆಜ್ಜೆ: ಹಿಲರಿ
'ಎ.ಕ್ಯೂ. ಖಾನ್ ಪರಮಾಣು ಜಾಲ ಸಂಪೂರ್ಣವಾಗಿ ನಿಂತಿಲ್ಲ'