ಜಾರ್ಜ್ ಡಬ್ಲ್ಯು ಬುಷ್ ಅವರು ಕೆನಡಾದಲ್ಲಿ ತಮ್ಮ ಅಧ್ಯಕ್ಷಗಿರಿಯ ನಂತರದ ಭಾಷಣ ಮಾಡಲಿದ್ದು, ಕೆನಡಿಗರು ಬುಷ್ ವಿರುದ್ಧ ಪ್ರತಿಭಟನೆ ಸಲುವಾಗಿ ಬೂಟುಗಳನ್ನು ಸಂಗ್ರಹಿಸಿದ್ದಾರೆ.
ಬುಷ್ ಅವರು ಸುಮಾರು 1500 ಜನರನ್ನು ಉದ್ದೇಶಿಸಿ ಕಲ್‌ಗಾರಿ ಸಮಾವೇಶ ಕೇಂದ್ರದ ಭೋಜನಕೂಟದ ಸಭೆಯಲ್ಲಿ ಮಾತನಾಡಲಿದ್ದು, ಸಮಾವೇಶ ಕೇಂದ್ರದ ಹೊರಗೆ ಬುಷ್ ಪ್ರತಿಮೆಗೆ ಬೂಟುಗಳನ್ನು ಎಸೆಯುವ ಪ್ರಕ್ರಿಯೆ ಆರಂಭವಾಗಲಿದೆ.
ಇರಾಕ್ ವಿರುದ್ಧ ಬುಷ್ ಆಕ್ರಮಣ ಮತ್ತು ಭಯೋತ್ಪಾದಕ ಶಂಕಿತರಿಗೆ ಚಿತ್ರಹಿಂಸೆ ಪ್ರತಿಭಟಿಸಿ ರಾಷ್ಟ್ರಾದ್ಯಂತ ಸುಮಾರು 200 ಪ್ರತಿಭಟನೆಕಾರರು ಪಾಲ್ಗೊಳ್ಳುವರೆಂದು ನಿರೀಕ್ಷಿಸಲಾಗಿದೆ ಎಂದು ಕೆನಡ ಶಾಂತಿ ಮೈತ್ರಿಕೂಟದ ಕೊಲಟ್ ಲೆಮಿಕ್ಸ್ ತಿಳಿಸಿದರು.
ಬುಷ್ ಯುದ್ಧಾಪರಾಧಿಯಾಗಿದ್ದು, ಅಮೆರಿಕದ ಭಯೋತ್ಪಾದನೆ ವಿರುದ್ಧ ಯುದ್ಧದಲ್ಲಿ ಬುಷ್ ಆಡಳಿತದ ನೀತಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಲೆಮಿಕ್ಸ್ ಒತ್ತಾಯಿಸಿದ್ದಾರೆ. ಅವರು ಅಧ್ಯಕ್ಷರಾಗಿಲ್ಲದಿದ್ದರೆ ಪರವಾಗಿಲ್ಲ. ಬ್ಯಾಂಕ್ ದರೋಡೆಕೋರ ದರೋಡೆ ನಿಲ್ಲಿಸಿದ ಮೇಲೂ ಅವನ ಅಪರಾಧಗಳಿಗೆ ಶಿಕ್ಷೆಯಾಗುತ್ತದೆ. ಹಾಗೇ ಬುಷ್‌ಗೆ ಕೂಡ ಅದು ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ. |