ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಾಮಾಚಾರ ವೈದ್ಯರಿಂದ ಸಾವಿರ ಗ್ರಾಮಸ್ಥರ ಅಪಹರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಮಾಚಾರ ವೈದ್ಯರಿಂದ ಸಾವಿರ ಗ್ರಾಮಸ್ಥರ ಅಪಹರಣ
ಜಾಂಬಿಯಾದ ಸುಮಾರು 1000 ಗ್ರಾಮಸ್ಥರನ್ನು ವಾಮಾಚಾರ ವೈದ್ಯರು ಅಪಹರಿಸಿ ಗುಪ್ತ ಬಂಧನ ಕೇಂದ್ರಗಳಲ್ಲಿ ಇರಿಸಿದ್ದಲ್ಲದೇ ಗಿಡಮ‌ೂಲಿಕೆ ಕಷಾಯವನ್ನು ಬಲವಂತವಾಗಿ ಕುಡಿಸಿದ್ದಾರೆಂದು ಮಾನವ ಹಕ್ಕು ಸಂಘಟನೆ ಆರೋಪಿಸಿದೆ.

ಕಷಾಯವನ್ನು ಕುಡಿದ ಅನೇಕ ಮಂದಿ ಮ‌ೂತ್ರಪಿಂಡದ ಸಮಸ್ಯೆಗಳಿಗೆ ಒಳಗಾಗಿದ್ದು, ಅವರಲ್ಲಿ ಇಬ್ಬರು ಅಸುನೀಗಿದ್ದಾರೆ. ವಾಮಾಚಾರ ವೈದ್ಯರನ್ನು ಪೊಲೀಸ್, ಸೇನೆ ಮತ್ತು ಅಧ್ಯಕ್ಷರ ಖಾಸಗಿ ರಕ್ಷಣಾ ಪಡೆ ಜತೆಗೂಡಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೆರೆಯ ಗಿನಿಯಕ್ಕೆ ಸೇರಿದ ವಾಮಾಚಾರ ವೈದ್ಯರನ್ನು ಅಧ್ಯಕ್ಷರ ಚಿಕ್ಕಮ್ಮನ ಸಾವಿನ ಬಳಿಕ ಜಾಂಬಿಯಕ್ಕೆ ಆಹ್ವಾನಿಸಲಾಗಿತ್ತು. ತಮ್ಮ ಗ್ರಾಮದ ಮೇಲೆ ವಾಮಾಚಾರ ವೈದ್ಯರ ದಾಳಿಯನ್ನು ಕಂಡ ನೂರಾರು ಜಾಂಬಿಯನ್ನರು ನೆರೆಯ ಸೆನೆಗಲ್‌ಗೆ ಪರಾರಿಯಾದರೆಂದು ಅಮ್ನೆಸ್ಟಿಯ ಲಂಡನ್ ನಿರ್ದೇಶಕಿ ಕೇಟ್ ಅಲೆನ್ ತಿಳಿಸಿದ್ದಾರೆ.

ಜಾಂಬಿಯ ಸರ್ಕಾರ ಈ ಆಂದೋಳನಕ್ಕೆ ತಡೆಹಾಕಿ ದಾಳಿಯ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕೆಂದು ಕೇಟ್ ಅಲೆನ್ ಒತ್ತಾಯಿಸಿದ್ದಾರೆ.

ವಾಮಾಚಾರ ವೈದ್ಯರ ದಾಳಿ ಕುರಿತು ಗ್ರಾಮಸ್ಥರ ಜತೆ ಅಮ್ನೆಸ್ಟಿ ಮಾತನಾಡಿದಾಗ, ತಮ್ಮನ್ನು ಐದಾರು ದಿನಗಳವರೆಗೆ ಬಂಧನದಲ್ಲಿರಿಸಿ ಅಜ್ಞಾತ ಪೇಯವನ್ನು ಬಲಾತ್ಕಾರದಿಂದ ಕುಡಿಸಿದ ಬಳಿಕ ತಾವು ಭ್ರಮಾಧೀನತೆಗೆ ಒಳಗಾಗಿ ವಿಚಿತ್ರವಾಗಿ ವರ್ತಿಸಿದ್ದಾಗಿ ಅವರು ನುಡಿದರು. ಕಷಾಯವನ್ನು ಕುಡಿದ ಅನೇಕ ಮಂದಿಗೆ ವಾಂತಿ, ಅತಿಸಾರ ಷುರುವಾಯಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಪಿಪಿ-ಪಿಎಂಎಲ್(ಎನ್) ಮೈತ್ರಿ ಸಾಧ್ಯತೆ: ಗಿಲಾನಿ
'ಸಿಪಾಯಿ ದಂಗೆ' ನೇತೃತ್ವದ ಸೈನಿಕರ ಗುರುತು ಪತ್ತೆ
ಕಾಬೂಲ್-ಉಗ್ರರ ನೆಲೆ ನಾಶಪಡಿಸಿ: ಅಮೆರಿಕ ತಾಕೀತು
ಲಂಡನ್:ಜನಾಂಗೀಯ ದಾಳಿ- ಗುರುದ್ವಾರಕ್ಕೆ ಬೆಂಕಿ
ಮಡಗಾಸ್ಕರ್ ಮಿಲಿಟರಿ ಆಡಳಿತ ತೆಕ್ಕೆಗೆ
ಕೆನಡಾ: ಬುಷ್ ಪ್ರತಿಮೆಗೆ ಬೂಟೇಟು ಸೇವೆ!