ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸ್ವಾತ್‌‌‌‌ನಲ್ಲಿ 'ಶರಿಯತ್ ಕೋರ್ಟ್' ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವಾತ್‌‌‌‌ನಲ್ಲಿ 'ಶರಿಯತ್ ಕೋರ್ಟ್' ಆರಂಭ
ವಾಯವ್ಯ ಪಾಕಿಸ್ತಾನದ ತಾಲಿಬಾನ್ ಭದ್ರನೆಲೆ ಸ್ವಾತ್ ಪ್ರಕ್ಷುಬ್ಧ ಪ್ರದೇಶದಲ್ಲಿ ಸರ್ಕಾರ ಮತ್ತು ಉಗ್ರಗಾಮಿಗಳ ನಡುವೆ ಶಾಂತಿ ಒಪ್ಪಂದದ ಅನ್ವಯ ಇಸ್ಲಾಮಿಕ್ ಕೋರ್ಟ್‌ಗಳು ಕಾರ್ಯನಿರ್ವಹಣೆ ಆರಂಭಿಸಿವೆ.

ವಾಯವ್ಯ ಗಡಿ ಪ್ರಾಂತೀಯ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಟಿಎನ್‌ಎಸ್‌ಎಂ ಮುಖ್ಯಸ್ಥ ಸೂಫಿ ಮಹಮದ್ ಸಹಿ ಹಾಕಿದ ಬಳಿಕ ಕಠಿಣ ಧಾರ್ಮಿಕ ಕಾನೂನನ್ನು ಅನಸರಿಸುವ ಕೋರ್ಟ್‌ಗಳು ಅಸ್ತಿತ್ವಕ್ಕೆ ಬಂದಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರದಿಂದ 7 ಇಸ್ಲಾಮಿಕ್ ಕೋರ್ಟ್‌ಗಳು ಕಣಿವೆಯಲ್ಲಿ ಕಾರ್ಯಾರಂಭ ಮಾಡಿವೆ ಎಂದು ಮಲಕಾಂಡ್ ಆಯುಕ್ತ ಸಯ್ಯದ್ ಮಹಮ್ಮದ್ ಜಾವೇದ್ ತಿಳಿಸಿದ್ದಾರೆ.

ಆದರೆ ಇಸ್ಲಾಮಿಕ್ ಕಾನೂನಿನಲ್ಲಿ ಸೂಕ್ತ ಪದವಿಯಿಲ್ಲದ ಕಾಜಿಗಳಿಗೆ ಧಾರ್ಮಿಕ ನ್ಯಾಯಾಲಯಗಳಲ್ಲಿ ಕೆಲಸ ಮಾಡಲು ಅವಕಾಶ ನೀಡದೇ ಜಿಲ್ಲೆಯಲ್ಲಿ ಅವರನ್ನು ಹೊರಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಶರಿಯತ್ ಕಾನೂನಿನ ಜಾರಿಯಿಂದ ಸೂಕ್ತ ಇಸ್ಲಾಮಿಕ್ ತರಬೇತಿಯಿಲ್ಲದ ನ್ಯಾಯಾಧೀಶರು ಕೋರ್ಟ್‌ಗೆ ಹೋಗುವುದನ್ನು ನಿಲ್ಲಿಸಿದ್ದಾರೆಂದು ಹಿರಿಯ ವಕೀಲರೊಬ್ಬರು ತಿಳಿಸಿದರು. ಆದರೆ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಇನ್ನೂ ನಿಜಾಂ-ಎ-ಅಡಲ್ (ಶಾರಿ) ನಿಯಂತ್ರಣಕ್ಕೆ ಸಹಿ ಹಾಕಿಲ್ಲವಾದ್ದರಿಂದ ಖಾಜಿ ಕೋರ್ಟ್ ಕಾನೂನುಬದ್ಧತೆಯು ಸಂದೇಹಪೂರಿತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಂಕಾ: 41 ಉಗ್ರರ ಹತ್ಯೆ
ಇಂಡೋನೇಷ್ಯಾ: ಭೂಕುಸಿತಕ್ಕೆ 4 ಬಲಿ
ವಾಮಾಚಾರ ವೈದ್ಯರಿಂದ ಸಾವಿರ ಗ್ರಾಮಸ್ಥರ ಅಪಹರಣ
ಪಿಪಿಪಿ-ಪಿಎಂಎಲ್(ಎನ್) ಮೈತ್ರಿ ಸಾಧ್ಯತೆ: ಗಿಲಾನಿ
'ಸಿಪಾಯಿ ದಂಗೆ' ನೇತೃತ್ವದ ಸೈನಿಕರ ಗುರುತು ಪತ್ತೆ
ಕಾಬೂಲ್-ಉಗ್ರರ ನೆಲೆ ನಾಶಪಡಿಸಿ: ಅಮೆರಿಕ ತಾಕೀತು