ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 225 ಒಳಚಡ್ಡಿಗಳನ್ನೇ ಕದ್ದ 'ಪುಣ್ಯಾತ್ಮ'ರು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
225 ಒಳಚಡ್ಡಿಗಳನ್ನೇ ಕದ್ದ 'ಪುಣ್ಯಾತ್ಮ'ರು!
ಟೆಕ್ಸಾಸ್: ಮೊನ್ನೆ ಮೊನ್ನೆ 'ಪ್ರೇಮಿಗಳು ವ್ಯಾಲೆಂಟೈನ್ ಡೇ ಆಚರಿಸಿದರೆ ಮದುವೆ ಮಾಡಿಸುತ್ತೇನೆ' ಎಂದು ಧಮಕಿ ಹಾಕಿದ್ದ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕರಿಗೆ ಆಧುನಿಕ ಮಹಿಳೆಯರ ಬಣ ಸೇರಿ ಸಾವಿರಾರು ಪಿಂಕ್ ಚಡ್ಡಿಗಳನ್ನು ಕೊರಿಯರ್ ಮಾಡಿದ್ದು ಈಗ ಹಳೇ ಸುದ್ದಿ. ಸುದ್ದಿ ಎಷ್ಟೇ ಹಳೆಯದೇ ಇರಲಿ, ಆದರೆ ಎಲ್ಲರ ಮನೆ ಮನದಲ್ಲೂ ಈ 'ಪಿಂಕ್ ಚಡ್ಡಿ' ಸ್ಥಾನ ಪಡೆಯುವಂತಾಯಿತು. ಪ್ರಮೋದ ಮುತಾಲಿಕರೂ ಫ್ರೀಯಾಗಿ ಪಿಂಕ್ ಚಡ್ಡಿ ಗಿಟ್ಟಿಸಿಕೊಂಡರು.

ಈ ವಿಷಯ ಒತ್ತಟ್ಟಿಗಿರಲಿ, ಇದೀಗ ಚಡ್ಡಿ ವಿಷಯ ಯಾಕಪ್ಪಾ ಅಂದರೆ, ಇಲ್ಲೊಂದು ಇಂಟರೆಸ್ಟಿಂಗ್ ಕಥೆಯಿದೆ. ಟೆಕ್ಸಾಸ್‌ನಲ್ಲಿ ಮೂವರು ಕಳ್ಳರು ಖ್ಯಾತ ಮಳಿಗೆಯಿಂದ ಕೇವಲ ಒಳಚಡ್ಡಿಗಳನ್ನೇ ಕಳ್ಳತನ ಮಾಡಿದ್ದಾರಂತೆ. ಪೋಲೀಸರೇ ಈ ಒಳಚಡ್ಡಿ ಕಳ್ಳರನ್ನು ಪತ್ತೆಹಚ್ಚಿದ್ದಾರೆ. ಅಂದಹಾಗೆ ಇವರು ಕದ್ದಿದ್ದು ಬರೋಬ್ಬರಿ 3,400 ಡಾಲರ್‌ಗಳ 225 ಒಳಚಡ್ಡಿಗಳನ್ನು!

ಮಹಿಳೆಯರ ಹಾಗೂ ಪುರುಷರ ಒಳ ಉಡುಪುಗಳು, ಅಲಂಕಾರಿಕ ವಸ್ತುಗಳು ಹಾಗೂ ಕಾಸ್ಮೆಟಿಕ್‌ಗಳ ದೈತ್ಯ ಕಂಪನಿ ವಿಕ್ಟೋರಿಯನ್ ಸೀಕ್ರೆಟ್‌ನ ಮಳಿಗೆಯೊಂದರಲ್ಲಿ ಈ ಮೂವರು ಕಳ್ಳರು 225 ಚಡ್ಡಿಗಳನ್ನು ಕದ್ದಿದ್ದಾರೆ. ಈ ಕಳ್ಳರಲ್ಲಿ ಇಬ್ಬರು ಪುರುಷರಾದರೆ, ಒಬ್ಬರು ಮಹಿಳೆಯಂತೆ. ಟೆಕ್ಸಾಸ್ ಹೊರವಲಯದಲ್ಲಿನ ವಿಕ್ಟೋರಿಯನ್ ಸೀಕ್ರೆಟ್ ಶಾಪಿಂಗ್ ಮಳಿಗೆಗೆ ಬಂದ ಈ ಕಳ್ಳರು ಪ್ರತಿಯೊಂದಕ್ಕೆ 14 ಡಾಲರ್ ಬೆಲೆಬಾಳುವ 100 ಚಡ್ಡಿಗಳು ಹಾಗೂ ಪ್ರತಿಯೊಂದಕ್ಕೆ 16 ಡಾಲರ್ ಬೆಲೆಯುಳ್ಳ 125 ಚಡ್ಡಿಗಳನ್ನು ಕಳ್ಳತನ ಮಾಡಿದ್ದಾರೆ.

ಎಲ್ಲ ಗ್ರಾಹಕರು ತಮ್ಮ ತಮ್ಮ ಖರೀದಿಗಳಲ್ಲಿ ವ್ಯಸ್ತರಾಗಿರುವಾಗ ವಿಕ್ಟೋರಿಯನ್ ಸೀಕ್ರೆಟ್‌ನ ಹೊರಭಾಗದಲ್ಲಿ ಪ್ರದರ್ಶನಕ್ಕಿಟ್ಟ ಚಡ್ಡಿಗಳ ಪಕ್ಕದಲ್ಲೇ ಇರುವ ಚಡ್ಡಿಗಳ ಇರುವ ಡ್ರಾಯರ್‌ಗಳಿಂದ ಈ ಬರೋಬ್ಬರಿ 225 ಚಡ್ಡಿಗಳನ್ನು ಮೆಲ್ಲನೆ ತಮ್ಮ ಬ್ಯಾಗ್‌ನಲ್ಲಿ ಹಾಕಿ ಪರಾರಿಯಾಗಿದ್ದಾರೆ. ಈಗ ಪೋಲೀಸರು ಈ ಮೂರು ಒಳಚಡ್ಡಿ ಕಳ್ಳರ ಹುಡುಕಾಟದಲ್ಲಿದ್ದಾರಂತೆ.

ಮಂಗಳೂರು ಪಬ್ ದಾಳಿ ಅಂತಾರಾಷ್ಟ್ರೀಯವಾಗಿ ಖ್ಯಾತಿಗೊಂಡ ಮೇಲೆ ಚಡ್ಡಿಗಳಿಗಂತೂ ಬೆಲೆ ಬಂತು ನೋಡಿ. ಅಂದಹಾಗೆ ಇವರು ಕದ್ದಿದ್ದು ಪಿಂಕ್ ಚಡ್ಡಿಯನ್ನೋ ಎಂಬ ವಿಷಯ ಇನ್ನೂ ಬಹಿರಂಗಗೊಂಡಿಲ್ಲವಂತೆ!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
6 ವರ್ಷಗಳ ನಂತರವೂ ಅಪಾಯದ ಸುಳಿಯಲ್ಲಿ 'ಇರಾಕ್'
ಬ್ರಿಟನ್ ನಟಿ ನಟಾಶಾ ಅಪಘಾತದಲ್ಲಿ ಸಾವು
ಸ್ವಾತ್‌‌‌‌ನಲ್ಲಿ 'ಶರಿಯತ್ ಕೋರ್ಟ್' ಆರಂಭ
ಲಂಕಾ: 41 ಉಗ್ರರ ಹತ್ಯೆ
ಇಂಡೋನೇಷ್ಯಾ: ಭೂಕುಸಿತಕ್ಕೆ 4 ಬಲಿ
ವಾಮಾಚಾರ ವೈದ್ಯರಿಂದ ಸಾವಿರ ಗ್ರಾಮಸ್ಥರ ಅಪಹರಣ