ಮುಂಬೈ ಭಯೋತ್ಪಾದನೆ ದಾಳಿ ಬಳಿಕ ಭಾರತ ಸರ್ಕಾರದ ಜವಾಬ್ದಾರಿಯುತ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವ ಅಮೆರಿಕದ ಉನ್ನತಾಧಿಕಾರಿಗಳು, ಪಾಕಿಸ್ತಾನವು ಭಯೋತ್ಪಾದನೆಯ ಅಗ್ನಿಕುಂಡವೆಂದು ಅಮೆರಿಕ ಗುರುತಿಸಿದ್ದು ಅದನ್ನು ನಿಯಂತ್ರಿಸಬೇಕಾದ ಅಗತ್ಯವಿದೆಯೆಂದು ಭಾರತೀಯ ಸಿಇಒ ತಂಡಕ್ಕೆ ತಿಳಿಸಿದ್ದಾರೆ.
ಭಾರತ ಜವಾಬ್ದಾರಿಯಿಂದ ವರ್ತಿಸಿದ್ದಕ್ಕೆ ಅವರು ಮೆಚ್ಚಿಗೆ ಸೂಚಿಸಿದ್ದು, ಒಳ್ಳೆಯ ಸುದ್ದಿಯೇನೆಂದರೆ ಪಾಕಿಸ್ತಾನ ಭಯೋತ್ಪಾದನೆಯ ಅಗ್ನಿಕುಂಡವೆಂದು ಒಬಾಮಾ ಆಡಳಿತ ಗುರುತಿಸಿದೆಯೆಂದು ಭಾರತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಮಿತ್ತಲ್ ತಿಳಿಸಿದ್ದಾರೆ.
ಇಲ್ಲಿನ ಸಿಐಐ ನಿಯೋಗದ ನೇತ್ರತ್ವವನ್ನು ಅವರು ವಹಿಸಿದ್ದರು.ಇಡೀ ವಲಯ ಸುರಕ್ಷಿತವಾಗಿರುವಂತೆ ಖಾತರಿಗೆ ಭಾರತದ ಜತೆ ಸಹಭಾಗಿತ್ವಕ್ಕೆಅಮೆರಿಕ ಬಯಸುತ್ತದೆಂದು ಮಿಟ್ಟಲ್ ತಿಳಿಸಿದರು. ಮಿಟ್ಟಲ್ ಒಬಾಮಾ ಆಡಳಿತ ಉನ್ನತಾಧಿಕಾರಿಗಳನ್ನು ಭೇಟಿ ಮಾಡಲು ಭಾರತೀಯ ಸಿಇಒಗಳ ತಂಡದ ನೇತೃತ್ವ ವಹಿಸಿದ್ದರು. ಉಪಖಂಡದಲ್ಲಿ ವಿಶೇಷವಾಗಿ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಪ್ರಸಕ್ತ ಉದ್ವಿಗ್ನಕಾರಿ ಪರಿಸ್ಥಿತಿ ಬಗ್ಗೆ ಸಿಇಒಗಳು ಕಳವಳ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ.
'ಭಾರತದ ಹೊರಗೆ ಉಪಖಂಡದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳು ಆತಂಕಕಾರಿಯಾಗಿವೆ. ಒಂದು ಬದಿಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಪರಿಸ್ಥಿತಿ, ಸತತ ಶ್ರೀಲಂಕಾ ಒತ್ತಡ, ಬಾಂಗ್ಲಾದೇಶದ ದಂಗೆ, ಮ್ಯಾನ್ಮಾರ್ ವಿಷಯಗಳು ಮತ್ತು ನೇಪಾಳದಲ್ಲಿ ಮಾವೋವಾದಿಗಳ ತಲೆಎತ್ತುವಿಕೆ ಕಳವಳಕಾರಿಯಾಗಿವೆ' ಎಂದು ಮಿತ್ತಲ್ ತಿಳಿಸಿದ್ದಾರೆ. |