ನ್ಯಾಟೊಗೆ ಹೊಸ ಉನ್ನತ ಕಮಾಂಡರ್ ನೇವಿ ಅಡ್ಮಿರಲ್ ಜೇಮ್ಸ್ ಸ್ಟಾವ್‌ರಿಡಿಸ್‌ನನ್ನು ಒಬಾಮಾ ಆಡಳಿತ ಬುಧವಾರ ಆಯ್ಕೆಮಾಡಿದೆ.
ಆಫ್ಘಾನಿಸ್ತಾನ ಯುದ್ಧದಲ್ಲಿ ಉಗ್ರಗಾಮಿಗಳ ಹಿಂಸಾಚಾರ ಮೇರೆಮೀರಿದ ಹಿನ್ನೆಲೆಯಲ್ಲಿ ಮೈತ್ರಿಕೂಟವು ತನ್ನ ಹೋರಾಟವನ್ನು ತೀವ್ರಗೊಳಿಸಿರುವ ನಡುವೆ ಒಬಾಮಾ ಆಡಳಿತ ಈ ಕ್ರಮ ಕೈಗೊಂಡಿದೆ.
ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ನೇತೃತ್ವ ವಹಿಸಿರುವ ಅಮೆರಿಕ ದಕ್ಷಿಣ ಕಮಾಂಡ್‌ಗೆ ಸ್ಟಾವಿರಿಡಿಸ್ ಮುಖ್ಯಸ್ಥರಾಗಿದ್ದರು. ಇದಕ್ಕೆ ಮುಂಚಿತವಾಗಿ ರಮ್ಸ್‌ಫೆಲ್ಡ್ ಪೆಂಟಗಾನ್ ಮುಖ್ಯಸ್ಥರಾಗಿದ್ದಾಗ ಅವರಿಗೆ ಹಿರಿಯ ಮಿಲಿಟರಿ ಸಹಾಯಕರಾಗಿ ಕೆಲಸ ಮಾಡಿದ್ದರು.
ಅಡ್ಮಿರಲ್ ಸ್ಟಾವಿರಿಡಿಸ್ ಸೌತ್‌ಕಾಂನಲ್ಲಿ ಮಿಲಿಟರಿ ನಡುವೆ ಸಂಬಂಧ ಬಲಪಡಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆಂದು ಗೇಟ್ಸ್ ಹೇಳಿದ್ದು, ಇದೊಂದು ಸವಾಲಿನ ಕೆಲಸವೆಂದು ಅವರು ನುಡಿದಿದ್ದಾರೆ. |