ನಮಿಬೀಯಾದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, 100ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಕಳೆದ ನಾಲ್ಕು ದಶಕಗಳಲ್ಲಿ ಕಾಣದಂತಹ ಅತ್ಯಂತ ದೊಡ್ಡ ಮಟ್ಟದ ಪ್ರವಾಹ ಇದಾಗಿದ್ದು, ಅಪಾರ ಸಂಖ್ಯೆಯ ಕೃಷಿ ಭೂಮಿ ನಾಶವಾಗಿದೆ. ನಮೀಬಿಯಾದಲ್ಲಿ ತುರ್ತು ಪರಿಸ್ಥತಿ ಘೋಷಿಸಿದ್ದು, ವಿಶ್ವಸಂಸ್ಥೆಯ ನೆರವಿಗೆ ಮನವಿ ಮಾಡಲಾಗಿದೆ. |