ದೂರಪ್ರಯಾಣದ ಬಸ್ಸೊಂದು ಸಾರಿಗೆ ಟ್ರಕ್ಕೊಂದಕ್ಕೆ ಹಿಮಪೂರಿತ ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದಿದ್ದರಿಂದ 19 ಜನರು ಸತ್ತಿದ್ದು, ಅನೇಕ ಮಂದಿ ಗಾಯಗೊಂಡ ಘಟನೆ ಈಶಾನ್ಯ ಚೀನಾದಲ್ಲಿ ಸಂಭವಿಸಿದೆಯೆಂದು ಸ್ಟೇಟ್ ಪ್ರೆಸ್ ಶುಕ್ರವಾರ ತಿಳಿಸಿದೆ.
ಹೈಲೊಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ಜಾರುವ ರಸ್ತೆಯಲ್ಲಿ ಈ ಅಪಘಾತ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಬಸ್ಸು ಸಾರಿಗೆ ಟ್ರಕ್ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಬಳಿಕ ಟ್ರಕ್ ಇನ್ನೊಂದು ವಾಹನಕ್ಕೆ ಬಡಿದು ನಿಂತಿತೆಂದು ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ.
ಹರ್ಬಿನ್ ಪ್ರಾಂತೀಯ ರಾಜಧಾನಿಯಲ್ಲಿ ಈ ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 41 ಪ್ರಯಾಣಿಕರಿದ್ದು, ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಚೀನಾದಲ್ಲಿ ಕಳೆದ ವರ್ಷ ಸಂಭವಿಸಿದ 2,65,000 ರಸ್ತೆ ಅಪಘಾತಗಳಲ್ಲಿ 73,500 ಜನರು ಅಸುನೀಗಿದ್ದಾರೆಂದು ಪೊಲೀಸ್ ಅಂಕಿಅಂಶಗಳು ತಿಳಿಸಿವೆ. |