ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉ.ಕೊರಿಯ ಕ್ಷಿಪಣಿ ಹೊಡೆದುರುಳಿಸಲು ಅಮೆರಿಕ ಸಜ್ಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಕೊರಿಯ ಕ್ಷಿಪಣಿ ಹೊಡೆದುರುಳಿಸಲು ಅಮೆರಿಕ ಸಜ್ಜು
ಅಮೆರಿಕ ಪ್ರದೇಶದತ್ತ ಉಡಾಯಿಸಲಾಗುವ ಉತ್ತರ ಕೊರಿಯದ ಕ್ಷಿಪಣಿಯನ್ನು ಅಮೆರಿಕ ತಡೆಯಬಹುದಾದ ಸಂಭವನೀಯತೆ ಬಹುಮಟ್ಟಿಗಿದೆ ಎಂದು ಪೆಸಿಫಿಕ್ ವಲಯದ ಉನ್ನತ ಅಮೆರಿಕ ಕಮಾಂಡರ್ ಗುರುವಾರ ತಿಳಿಸಿದ್ದಾರೆ.

ಏಪ್ರಿಲ್ 4 ಮತ್ತು 8ರ ನಡುವೆ ಸಂಪರ್ಕ ಉಪಗ್ರಹ ಉಡಾವಣೆಗೆ ಉತ್ತರಕೊರಿಯ ಇಚ್ಛಿಸಿದ್ದು, ಬಾಹ್ಯಾಕಾಶ ಕಾರ್ಯಕ್ರಮದ ಅಡಿಯಲ್ಲಿ ಅದು ಉಪಗ್ರಹ ಉಡಾವಣೆ ಮಾಡುವ ಹಕ್ಕು ಹೊಂದಿರುವುದಾಗಿ ತಿಳಿಸಿದೆ. ಆದರೆ ಮರೆಯಲ್ಲಿ ದೂರಗಾಮಿ ಕ್ಷಿಪಣಿ ಪ್ರಯೋಗದ ಯೋಜನೆಯೆಂದು ವಾಷಿಂಗ್ಟನ್ ಮತ್ತು ಏಷ್ಯಾದ ಮಿತ್ರರಾಷ್ಟ್ರಗಳು ಆರೋಪಿಸಿವೆ.

ಉತ್ತರಕೊರಿಯದ ಉಪಗ್ರಹ ಟೇಪೊಡಾಂಗ್-2 ಅಲಾಸ್ಕಾಗೆ ಹಾರುವಷ್ಟು ವ್ಯಾಪ್ತಿಯನ್ನು ಹೊಂದಿದ್ದು, ಅಮೆರಿಕವು ರಾಕೆಟ್‌ಗೆ ಪ್ರತಿರೋಧ ಒಡ್ಡುತ್ತದೆಂದು ವಿಶ್ಲೇಷಕರು ನಿರೀಕ್ಷಿಸಿಲ್ಲ. ಏಕೆಂದರೆ ಅದು ಯುದ್ಧದ ಕ್ರಮವೆಂದು ವ್ಯೋಂಗ್‌ಯಾಂಗ್ ಭಾವಿಸುತ್ತದೆ.

ಉತ್ತರ ಕೊರಿಯ ಕ್ಷಿಪಣಿಯನ್ನು ಅಮೆರಿಕ ಪಡೆಗಳು ತಡೆಯುವುದೇ ಎಂಬ ಪ್ರಶ್ನೆಗೆ ತಡೆಯುವ ಸಂಭವನೀಯತೆ ಬಹುಮಟ್ಟಿಗಿದೆ ಎಂದು ಅಮೆರಿಕ ನೌಕಾದಳದ ಅಡ್ಮಿರಲ್ ಕೀಟಿಂಗ್ ಸೆನೆಟ್ ಶಸಸ್ತ್ರ ಸೇವೆ ಸಮಿತಿಯ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಉಪಗ್ರಹ ಉಡಾವಣೆ ಮತ್ತು ಕ್ಷಿಪಣಿ ಪರೀಕ್ಷೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅಮೆರಿಕ, ದಕ್ಷಿಣ ಕೊರಿಯ ಮತ್ತು ಜಪಾನ್ ತಿಳಿಸಿದೆ. ಉತ್ತರ ಕೊರಿಯನ್ನರು ಹೇಳುವಂತೆ ಇದು ಉಪಗ್ರಹ ಉಡಾವಣೆಯಾದರೂ, ದೂರಗಾಮಿ ಕ್ಷಿಪಣಿಗಳ ತಂತ್ರಜ್ಞಾನಕ್ಕೆ ನೆರವಾಗುತ್ತದೆಂದು ಚಿಲ್ಟನ್ ತಿಳಿಸಿದ್ದಾರೆ.

ರಾಕೆಟ್‌ನ ಮೊದಲ ಹಂತವು ಜಪಾನ್ ಸಮುದ್ರದಲ್ಲಿ ಬೀಳಲಿದ್ದು, ಎರಡನೇ ಹಂತವು ಫೆಸಿಫಿಕ್‌ನಲ್ಲಿ ಬೀಳಲಿದೆ ಎಂದು ಉತ್ತರ ಕೊರಿಯ ಹೇಳಿದ್ದು, ಕೊರಿಯದಲ್ಲಿ ಅಮೆರಿಕ ಪಡೆಗಳ ಕಮಾಂಡರ್ ವಾಲ್ಟರ್ ಶಾರ್ಪ್, 'ಕ್ಷಿಪಣಿ ಪರೀಕ್ಷೆ ಗಂಭೀರವಾಗಿದೆ. ಏಕೆಂದರೆ ಉತ್ತರ ಕೊರಿಯ 2006ರಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸಿರುವುದಾಗಿ' 'ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾ: ಬಸ್-ಟ್ರಕ್ ಡಿಕ್ಕಿ-19 ಸಾವು
ನಮಿಬೀಯಾ: ಪ್ರವಾಹಕ್ಕೆ 100 ಬಲಿ
ಲಂಕಾ: 32 ಉಗ್ರರ ಹತ್ಯೆ
ಬ್ರಿಟನ್‌‌ಗೆ ಬರಲು ಮೋದಿಗೆ ವೀಸಾ ನೀಡ್ಬೇಡಿ: ಜೀನಾ
ನ್ಯಾಟೊ ಕಮಾಂಡರ್ ಹುದ್ದೆಗೆ ಸ್ಟಾವ್‌ರಿಡಿಸ್ ನೇಮಕ
ವೆಸ್ಟ್ ಬ್ಯಾಂಕ್‌: 20 ಹಮಾಸ್ ನಾಯಕರ ಸೆರೆ