ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅರೆಬೆತ್ತಲೆ ಕುಣಿತಕ್ಕೆ ದುಬೈನಲ್ಲಿ ಕಟ್ಟುಪಾಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರೆಬೆತ್ತಲೆ ಕುಣಿತಕ್ಕೆ ದುಬೈನಲ್ಲಿ ಕಟ್ಟುಪಾಡು
ಅಬ್ಬರದ ಸಂಗೀತ ನುಡಿಸುವುದು, ನೃತ್ಯ, ನಗ್ನತೆಯ ಪ್ರದರ್ಶನ ಮತ್ತು ಚುಂಬಿಸುವುದು ಮತ್ತು ಸಾರ್ವಜನಿಕವಾಗಿ ಪ್ರೇಮಿಗಳು ಕೈಹಿಡಿದುಕೊಳ್ಳುವುದನ್ನು ಕೂಡ ಸೂಕ್ತವಲ್ಲದ ನಡವಳಿಕೆಯೆಂದು ದುಬೈನಲ್ಲಿ ಕಟ್ಟುಪಾಡು ವಿಧಿಸಲಾಗಿದೆ.

ದುಬೈ ಅಧಿಕಾರಿಗಳು ರೂಪಿಸಿದ ಸಾರ್ವಜನಿಕ ನಡುವಳಿಕೆ ಕುರಿತ ನೂತನ ಮಾರ್ಗದರ್ಶಕಗಳಲ್ಲಿ ಇವೆಲ್ಲಕ್ಕೂ ನಿಷೇಧ ವಿಧಿಸಲಾಗಿದೆ. ಮುಸ್ಲಿಂ ಬಹುಸಂಖ್ಯಾತರ ಸಂಪ್ರದಾಯಗಳಿಗೆ ಮನ್ನಣೆ ನೀಡಿ ಅಸಭ್ಯ ನಡವಳಿಕೆ ಸಾರ್ವಜನಿಕ ಸ್ಥಳಗಳಲ್ಲಿ ತೋರಿಸಬೇಡಿ ಎಂದು ವಿದೇಶಿಯರೇ ಶೇ.80ರಷ್ಟಿರುವ ದುಬೈ ನಿವಾಸಿಗಳಿಗೆ ದುಬೈ ಎಕ್ಸಿಕ್ಯೂಟಿವ್ ಮಂಡಳಿ ಸಲಹೆ ಮಾಡಿದೆ.

ಈ ಮಾರ್ಗದರ್ಶಕಗಳು ರಾಷ್ಟ್ರೀಯರು ಮತ್ತು ವಿದೇಶಿಯರು ಯಾರೇ ಉಲ್ಲಂಘನೆ ಮಾಡಿದರೆ ಅವರಿಗೆ ಕಾರಾಗೃಹವಾಸ ಕಾದಿದೆಯೆಂದು ಅರೇಬಿಕ್ ದಿನಪತ್ರಿಕೆಯನ್ನು ಉಲ್ಲೇಖಿಸಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ನಿಯೋಜಿತ ಮದ್ಯಪಾನದ ಪ್ರದೇಶಗಳ ಹೊರಗೆ ಅಲ್ಪಸ್ವಲ್ಪ ಮದ್ಯಸೇವನೆ ಮಾಡಿದ್ದು ಕಂಡುಬಂದರೆ ಕೂಡ, ಅವರಿಗೆ ದಂಡ ವಿಧಿಸಲಾಗುವುದು ಅಥವಾ ಕಾರಾಗೃಹಶಿಕ್ಷೆ ವಿಧಿಸಲಾಗುವುದು. ಯುಎಇಯ ಸದಸ್ಯ ರಾಷ್ಟ್ರವಾದ ದುಬೈ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ್ದು, ಏಷ್ಯಾದ ಕಾರ್ಮಿಕರು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವೃತ್ತಿಪರ ಉದ್ಯೋಗಿಗಳಿಂದ ಕೂಡಿದೆ. ಮಾರ್ಗದರ್ಶಿ ಸೂತ್ರಗಳು ಏನೇ ಆಗಿದ್ದರೂ, ಮದ್ಯದ ವಿಪುಲ ಸರಬರಾಜಾಗುವ ದುಬೈನ ಅನೇಕ ವಿಹಾರಧಾಮಗಳು ಮತ್ತು ರಾತ್ರಿಕ್ಲಬ್‌ಗಳಲ್ಲಿ ದಾಳಿ ನಡೆಯುವುದು ಅಸಂಭವವೆನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದುಬೈ, ಸಂಗೀತ, ಮುಸ್ಲಿಂ, ಅರೇಬಿಕ್
ಮತ್ತಷ್ಟು
ಉ.ಕೊರಿಯ ಕ್ಷಿಪಣಿ ಹೊಡೆದುರುಳಿಸಲು ಅಮೆರಿಕ ಸಜ್ಜು
ಚೀನಾ: ಬಸ್-ಟ್ರಕ್ ಡಿಕ್ಕಿ-19 ಸಾವು
ನಮಿಬೀಯಾ: ಪ್ರವಾಹಕ್ಕೆ 100 ಬಲಿ
ಲಂಕಾ: 32 ಉಗ್ರರ ಹತ್ಯೆ
ಬ್ರಿಟನ್‌‌ಗೆ ಬರಲು ಮೋದಿಗೆ ವೀಸಾ ನೀಡ್ಬೇಡಿ: ಜೀನಾ
ನ್ಯಾಟೊ ಕಮಾಂಡರ್ ಹುದ್ದೆಗೆ ಸ್ಟಾವ್‌ರಿಡಿಸ್ ನೇಮಕ