ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಅವರ ಸೋದರ ವಿರುದ್ಧ ಚುನಾವಣೆ ಸ್ಪರ್ಧೆ ನಿಷೇಧದ ತೀರ್ಪನ್ನು ಪರಾಮರ್ಶಿಸುವಂತೆ ಪಾಕಿಸ್ತಾನ ಸರ್ಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ನವಾಜ್ ಷರೀಫ್ ಮತ್ತು ಶಾಬಾಜ್ ಷರೀಫ್ ಅವರ ನಿಷೇಧದಿಂದ ಪಾಕಿಸ್ತಾನದಲ್ಲಿ ಅರಾಜಕ ಸ್ಥಿತಿ ಉಂಟಾಗಿತ್ತು. ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರು ವಕೀಲರ ಪ್ರತಿಭಟನೆಯಲ್ಲಿ ಭಾಗಿಯಾಗಿ ಇಫ್ತಿಕರ್ ಚೌಧರಿ ಮರುನೇಮಕಕ್ಕೆ ಒತ್ತಾಯಿಸಿದ ಬಳಿಕ ನ್ಯಾಯಾಧೀಶರ ಮರುನೇಮಕ ಮತ್ತು ಷರೀಫ್ ತೀರ್ಪಿನ ಪರಿಶೀಲನೆ ಮಾಡುವುದಾಗಿ ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತ್ತು.ಸುಪ್ರೀಂಕೋರ್ಟ್ ಕೆಳಕೋರ್ಟ್ ತೀರ್ಪನ್ನು ಎತ್ತಿಹಿಡಿದು ಷರೀಫ್ ಸೋದರರು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ವಿಧಿಸಿತ್ತು.
ಅದರಿಂದಾಗಿ ಶಾಬಾಜ್ ಷರೀಫ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಂವಿಧಾನದ ಹಿತಾಸಕ್ತಿ ಮತ್ತು ಕಾನೂನಿನ ನಿಯಮದ ಅನ್ವಯ ಆದೇಶವನ್ನು ಪರಾಮರ್ಶಿಸುವಂತೆ ತಾವು ಕೋರ್ಟ್‌ಗೆ ವಿನಂತಿಸಿರುವುದಾಗಿ ಅಟಾರ್ನಿ ಜನರಲ್ ಲತೀಫ್ ಖೋಸಾ ತಿಳಿಸಿದ್ದಾರೆ. |