ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇದು ಅಂತಿಂಥ ಬೆರಳಲ್ಲ, ಬೆರಳಲ್ಲೇ ಎಲ್ಲ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದು ಅಂತಿಂಥ ಬೆರಳಲ್ಲ, ಬೆರಳಲ್ಲೇ ಎಲ್ಲ!
ಫಿನ್‌ಲ್ಯಾಂಡ್‌: ಇಲ್ಲಿನ ಜೆರ್ರಿ ಜಲಾವಾ ಎಂಬ ಕಂಪ್ಯೂಟರ್ ಪ್ರೋಗ್ರಾಮರ್ ಒಬ್ಬರು ಈಗ ಬೆರಳಿಗೆ ಯುಎಸ್‌ಬಿಯನ್ನು ಅಳವಡಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದಷ್ಟೆ ಮೋಟಾರ್ ಬೈಕ್ ಅಫಘಾತದಲ್ಲಿ ಕಳೆದುಕೊಂಡ ಬೆರಳಿನ ಜಾಗದಲ್ಲಿ ಈಗ ಯುಎಸ್‌ಬಿ ಬಂದಿದೆ!

ಈ ಸ್ಪೆಷಲ್ ಬೆರಳು ಉಳಿದ ಯುಎಸ್‌ಬಿಗಳಂತೆಯೇ ಫೋಟೋಗಳು, ಸಿನಿಮಾಗಳು, ಫೈಲ್‌ಗಳು ಹಾಗೂ ಇತರ ಪ್ರಮುಖ ಮಾಹಿತಿಗಳನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆಯಂತೆ. ಆದರೂ ಆ ಕೃತಕ ಬೆರಳು (ಯುಎಸ್‌ಬಿ) ಉಳಿದ ಬೆರಳುಗಳಂತೆಯೇ ನೋಡಲು ಸಾಮಾನ್ಯವಾಗಿರುತ್ತದೆ. ಜತೆಗೆ ಜೆರ್ರಿ ತಮ್ಮ ಉಗುರನ್ನು ಎಳೆದು ಆ ಬೆರಳೆಂಬ ಯುಎಸ್‌ಬಿಯನ್ನು ಕಂಪ್ಯೂಟರ್‌ಗೆ ಸಿಕ್ಕಿಸಿದರೆ ಸಾಕು, ಅದರಲ್ಲಿ ಕಲೆ ಹಾಕಿದ ಫೈಲ್, ಸಿನಿಮಾ ಎಲ್ಲವನ್ನು ನೋಡಬಹುದು.

ಹೆಲ್ಸಿಂಕಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿರುವ ಜೆರ್ರಿ ತನ್ನ ಒಂದು ವಾರವಷ್ಟೆ ಹಳೆಯದಾಗಿರುವ ಮೊಟರ್ ಬೈಕ್ ದುಕೈ ಮಾನ್ಸ್ಟರ್ 696ನಲ್ಲಿ ಹೋಗುತ್ತಿದ್ದಾಗ ಅಫಘಾತವಾಯ್ತು. ಕೂಡಲೇ ಹೆಲ್ಸಿಂಕಿಯ ಆಸ್ಪತ್ರೆಗೆ ಓಡಿದ ಜೆರ್ರಿಯ ಬೆರಳು ಪರೀಕ್ಷಿಸಿ ವೈದ್ಯರು ಈ ಬೆರಳನ್ನು ರಕ್ಷಿಸಲು ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದರಂತೆ. ಹಾಗಾಗಿ ಕೃತಕ ಬಹೆರಳು ಕೂರಿಸಲಾಗಿದೆ. ಹೇಗೂ ಜೆರ್ರಿ ಕಂಪ್ಯೂಟರ್ ಪ್ರೋಗ್ರಾಮರ್ ಅಲ್ಲವೇ. ಹಾಗಾಗಿ ಹಳೆ ಬೆರಳಿದ್ದ ಜಾಗದಲ್ಲಿ ಬೆರಳಿನಂತೆಯೇ ಇರುವ ಯುಎಸ್‌ಬಿ ಬಂದಿದೆ.

ಜೆರ್ರಿ ಬಳಿ ಇರುವ ಫಿಂಗರ್ ಯುಎಸ್‌ಬಿ ಡ್ರೈವ್‌ನ್ನು ಬೇಡವಾದಾಗ ತೆಗೆದಿಡಬಹುದು. ಆದರೆ, ಈ ಬೆರಳನ್ನು ಶಾಶ್ವತವಾಗಿ ಅಳವಡಿಸಿಲ್ಲವಾದ್ದರಿಂದ ಬೇಡವಾದಾಗ ತೆಗೆಯಬಹುದಂತೆ. ತನಗೆ ಫೈಲ್ ನೋಡಬೇಕಾದ ತನ್ನ ಬೆರಳನ್ನು ಕಂಪ್ಯೂಟರ್‌ನಲ್ಲಿ ಸಿಕ್ಕಿಸಿದರೆ ಮುಗಿಯಿತು. ಅಂದಹಾಗೆ, ಜೆರ್ರಿ ಈಗ ತನ್ನ ಯುಎಸ್‌ಬಿ ಬೆರಳಿಗೆ ಇನ್ನೂ ಹೆಚ್ಚಿನ ಸಾಮರ್ಥ್ಯದ ಫೈಲ್ ಸೇವ್ ಮಾಡಲು ತಯಾರಿ ನಡೆಸುತ್ತಿದ್ದಾನಂತೆ. ಅಲ್ಲದೆ ಆತ ತಯಾರಿಸಲಿರುವ ಇನ್ನೊಂದು ಫಿಂಗರ್ ಯುಎಸ್‌ಬಿಯನ್ನು ಕೇವಲ ಬೆರಳ ತುದಿಯಲ್ಲಿ ಇಡುವಂತಾಗಿದ್ದು, ತೆಗೆದಿಡಬಲ್ಲುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಸ್ಟ್ರಿಯ: ವಿಕೃತ ಕಾಮಿ ತಂದೆಗೆ ಜೀವಾವಧಿ ಶಿಕ್ಷೆ
ಎಲ್‌‌ಟಿಟಿಇ ಪ್ರದೇಶದಿಂದ ನಾಗರಿಕರ ವಲಸೆ
ಷರೀಫ್ ಸ್ಪರ್ಧೆ ನಿಷೇಧ-ಪರಾಮರ್ಶೆಗೆ ಪಾಕ್ ಆದೇಶ
ಅರೆಬೆತ್ತಲೆ ಕುಣಿತಕ್ಕೆ ದುಬೈನಲ್ಲಿ ಕಟ್ಟುಪಾಡು
ಉ.ಕೊರಿಯ ಕ್ಷಿಪಣಿ ಹೊಡೆದುರುಳಿಸಲು ಅಮೆರಿಕ ಸಜ್ಜು
ಚೀನಾ: ಬಸ್-ಟ್ರಕ್ ಡಿಕ್ಕಿ-19 ಸಾವು