ಸೂಡನ್‌ನಲ್ಲಿ ಹದಗೆಟ್ಟ ಮಾನವೀಯ ನೆಲೆಯ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತೀವ್ರ ಭಿನ್ನಮತ ಬೆಳಕಿಗೆ ಬಂದಿದೆ.
ಸೂಡನ್ ಅಧ್ಯಕ್ಷ ಓಮರ್ ಅಲ್-ಬಷೀರ್ ಅವರು ಡಾರ್ಫರ್‌ನಿಂದ 13 ನೆರವು ಏಜೆನ್ಸಿಗಳ ಉಚ್ಚಾಟನೆಯಿಂದ ಈ ಬಿಕ್ಕಟ್ಟು ಭುಗಿಲೆದ್ದಿರುವುದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸಿವೆ. ಆದರೆ ಆಫ್ರಿಕನ್ನರು ಬಷೀರ್ ವಿರುದ್ಧ ಒಂದು ವರ್ಷದವರೆಗೆ ಯಾವುದೇ ಕ್ರಮವನ್ನು ಸ್ಥಗಿತಗೊಳಿಸುವಂತೆ ಕೋರಿದೆ.
ಶುಕ್ರವಾರ ನಡೆದ ಮುಕ್ತಚರ್ಚೆಯಲ್ಲಿ, ಬಷೀರ್ ವಿರುದ್ಧ ಕ್ರಮವನ್ನು ಒಂದು ವರ್ಷ ಅಮಾನತಿನಲ್ಲಿರಿಸಲು ಅತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿಯಮವನ್ನು ಜಾರಿಗೆ ತರುವಂತೆ 15 ಸದಸ್ಯರ ಮಂಡಳಿಗೆ ಆಫ್ರಿಕನ್ನರು ಒತ್ತಾಯಿಸಿದ್ದಾರೆ. ಆದರೆ ಪಾಶ್ಟಿಮಾತ್ಯ ರಾಷ್ಟ್ರಗಳ ತಕ್ಷಣದ ಪ್ರತಿಕ್ರಿಯೆ ನಕಾರಾತ್ಮಕವಾಗಿದೆ.
ಡಾರ್ಫರ್‌ನಲ್ಲಿ ಯುದ್ಧಾಪರಾಧಗಳಿಗಾಗಿ ಬಷೀರ್ ವಿರುದ್ಧ ಐಸಿಸಿ ಇತ್ತೀಚೆಗೆ ಬಂಧನದ ವಾರಂಟ್ ಜಾರಿ ಮಾಡಿತ್ತು. ಬಷೀರ್ ವಿರುದ್ಧ ಬಂಧನದ ಆದೇಶ ಜಾರಿ ಮಾಡಿದ ಬಳಿಕ ಸೂಡನ್ 13 ನೆರವು ಏಜೆನ್ಸಿಗಳನ್ನು ರಾಷ್ಟ್ರದಿಂದ ಉಚ್ಚಾಟನೆ ಮಾಡಿತ್ತು. ನೆರವು ಸಂಘಟನೆಗಳನ್ನು ಉಚ್ಚಾಟನೆ ಮಾಡುವ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಅಮೆರಿಕ ಮತ್ತಿತರ ಪಾಶ್ಟಿಮಾತ್ಯ ರಾಷ್ಟ್ರಗಳು ಒತ್ತಾಯಿಸಿದ್ದು, ಬಂಜರು ಪ್ರದೇಶದಲ್ಲಿ ಬದುಕುಳಿಯಲು 4.7 ದಶಲಕ್ಷ ಜನರು ನೆರವಿನ ಮೇಲೆ ಅವಲಂಬಿತರಾಗಿದ್ದಾರೆಂದು ತಿಳಿಸಿದರು. |