ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಲೈ ಪ್ರಭಾಕರನ್ ಮತ್ತು ಅವನ ಪುತ್ರ ಚಾರ್ಲ್ಸ್ ಆಂಥೋನಿ ಬಂಡುಕೋರ ಹಿಡಿತದ ಪುದುಕುಡಿಯಿರುಪ್ಪುವಿನ ಆಳವಾದ ಬಂಕರ್‌ಗಳಲ್ಲಿ ಅಡಗಿದ್ದಾರೆಂದು ನಂಬಲಾಗಿದ್ದು, ಆಗಾಗ್ಗೆ ಹೊರಕ್ಕೆ ಬಂದು ನಿಮ್ಮ ಮನೆಗಳನ್ನು ಬಿಡದಂತೆ ನಾಗರಿಕರಿಗೆ ಆದೇಶ ನೀಡುತ್ತಿದ್ದಾನೆಂದು ಹೇಳಲಾಗಿದೆ.
ಪುದುಕುಡಿಯರುಪ್ಪುವಿನ ಗುಂಡು ಹಾರಿಸದ ವಲಯದಲ್ಲಿ ಸಾಮಾನ್ಯ ಉಡುಪಿನಲ್ಲಿ ಅವರಿಬ್ಬರು ಪತ್ತೆಯಾಗಿದ್ದು, ತಮಿಳು ನಾಗರಿಕರ ಜತೆ ಸೇರಲು ಆಗಾಗ್ಗೆ ಬಂಕರ್‌ನಿಂದ ಈಚೆ ಬರುತ್ತಾರೆಂದು ನಂಬಲಾಗಿದೆ. ಎಲ್‌ಟಿಟಿಇ ನಾಯಕ ತನ್ನ ಪುತ್ರ ಚಾರ್ಲ್ಸ್ ಅಂಥೋನಿ ಸೀಲನ್ ಜತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ.
ಇವರಿಬ್ಬರು ಬಹುತೇಕ ವೇಳೆ ಭೂಗರ್ಭದ ಬಂಕರ್‌ನಲ್ಲಿ ಅಡಗಿರುತ್ತಾರೆಂದು ಮೂಲಗಳನ್ನು ಉಲ್ಲೇಖಿಸಿ ರಕ್ಷಣಾ ಸಚಿವಾಲಯ ತಿಳಿಸಿದೆ. ತಮಿಳು ನಾಗರಿಕರ ಹೇಳಿಕೆಯನ್ನು ಉಲ್ಲೇಖಿಸಿ ಸೇನಾ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಆಗಾಗ್ಗೆ ಬಂಕರ್‌ನಿಂದ ಹೊರಬಂದು ಸರ್ಕಾರಿ ಪಡೆಗಳ ವಿರುದ್ಧ ದಂಗೆಯೇಳುವ ಅಗತ್ಯವನ್ನು ನಾಗರಿಕರಿಗೆ ಮನದಟ್ಟು ಮಾಡುತ್ತಿದ್ದರೆಂದು ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. |