ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನ: 20 ತಾಲಿಬಾನ್ ಉಗ್ರರು ಬಂಧಮುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ: 20 ತಾಲಿಬಾನ್ ಉಗ್ರರು ಬಂಧಮುಕ್ತ
ತಾಲಿಬಾನ್ ಪ್ರಾಬಲ್ಯದ ಸ್ವಾತ್ ಕಣಿವೆಯಲ್ಲಿ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಲು ಸದ್ಭಾವನೆಯ ಸಂಕೇತವಾಗಿ ಪಾಕಿಸ್ತಾನದ ಅಧಿಕಾರಿಗಳು ಶುಕ್ರವಾರ ಬಂಧಿತ 20 ಉಗ್ರಗಾಮಿಗಳನ್ನು ಬಿಡುಗಡೆ ಮಾಡಿದ್ದಾರೆ.

ಬಿಡುಗಡೆಯಾದ ಉಗ್ರಗಾಮಿಗಳು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಸೋದರ ನುರುಲ್ ಹುಡಾ ಸೇರಿದ್ದಾನೆಂದು ಸ್ವಾತ್ ಅಧಿಕಾರಿಗಳು ತಿಳಿಸಿದ್ದಾಗಿ ಎಪಿಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಯವ್ಯ ಗಡಿ ಪ್ರಾಂತೀಯ ಸರ್ಕಾರ ಮತ್ತು ಸೂಫಿ ಮಹಮದ್ ನೇತೃತ್ವದ ಧಾರ್ಮಿಕ ತೀವ್ರವಾದಿಗಳ ಗುಂಪಾದ ಟಿಎನ್‌ಎಸ್‌ಎಂ ನಡುವೆ ಅಂಕಿತ ಹಾಕಲಾದ ಶಾಂತಿ ಒಪ್ಪಂದದ ಅನ್ವಯ ಉಗ್ರರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ 20 ಉಗ್ರರನ್ನು ಶಾಂತಿ ಸಮಿತಿಗೆ ಹಸ್ತಾಂತರಿಸಲಾಗಿದೆ.

ಒಪ್ಪಂದಕ್ಕೆ ಅಂಕಿತ ಹಾಕಿದ ಮೇಲೆ ಇದುವರೆಗೂ 20ಕ್ಕೂ ಹೆಚ್ಚು ತಾಲಿಬಾನಿಗಳ ಬಿಡುಗಡೆಯಾಗಿದೆ. ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಟಿಎನ್‌ಎಸ್‌ಎಂ ಸದಸ್ಯರು ಮತ್ತು ಶಾಂತಿಸಮಿತಿಯ ನಡುವೆ ಸುದೀರ್ಘ ಮಾತುಕತೆಯ ಬಳಿಕ ಉಗ್ರರನ್ನು ಬಿಡುಗಡೆ ಮಾಡಲಾಗಿದೆ. ಬಂಧಮುಕ್ತರಾದ ಉಗ್ರಗಾಮಿಗಳು ಮತ್ತೆ ಹಿಂಸಾಚಾರಕ್ಕೆ ಇಳಿಯುವುದಿಲ್ಲ ಎಂದು ಶಾಂತಿಸಮಿತಿಯು ಸರ್ಕಾರಕ್ಕೆ ಭರವಸೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭೂಗರ್ಭದ ಬಂಕರ್‌ನಲ್ಲಿ ಪ್ರಭಾಕರನ್: ಸೇನೆ
ಭಾರತ, ಚೀನಾ ವಿದ್ಯಾರ್ಥಿಗಳಿಗೆ ಪೈಪೋಟಿ ಕೊಡಿ: ಒಬಾಮಾ
ಬಷೀರ್ ವಿವಾದ: ಭದ್ರತಾಮಂಡಳಿಯಲ್ಲಿ ಭಿನ್ನಮತ
ಪ್ರವಾದಿ ಜಮಾಖಾನೆ 5.5 ಮಿ.ಡಾಲರ್‌ಗೆ ಹರಾಜು
ಮುಖ್ಯನ್ಯಾಯಮ‌ೂರ್ತಿಯಾಗಿ ಇಫ್ತಿಕರ್ ಚೌಧರಿ ಮರುನೇಮಕ
ಉತ್ತರ-ದಕ್ಷಿಣ ಕೊರಿಯ ಹಾಟ್‌ಲೈನ್ ಮರುಸ್ಥಾಪನೆ