ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತೀಯನ ಕೊಂದ 3 ಯುಕೆ ಯುವಕರಿಗೆ ಜೈಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯನ ಕೊಂದ 3 ಯುಕೆ ಯುವಕರಿಗೆ ಜೈಲು
ಲಂಡನ್: ಜನಾಂಗೀಯ ಕಲಹದ ಹಿನ್ನೆಲೆಯಲ್ಲಿ 2007ರಲ್ಲಿ ಸೌತಂಪ್ಟನ್‌ನಲ್ಲಿ ಭಾತೀಯ ನಾವಿಕನೊಬ್ಬನನ್ನು ಕೊಲೆ ಮಾಡಿರುವ ಮೂವರು ಹದಿಹರೆಯದ ಯುವಕರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಚೇ ಫೀಲ್ಡ್ಸ್, ಸ್ಟೀಫನ್ ಪ್ರಿಟ್ಚಾರ್ಡ್ ಮಚ್ಚು ಡೇನಿಯಲ್ ರೊಜರ್ಸ್ ಎಂಬವರು ಗೋವಾ ಮೂಲಕ ನಾವಿಕ ಗ್ರೆಗರಿ ಫರ್ನಾಂಡಿಸ್ ಎಂಬಾತನ ಮೇಲೆ 'ನಾಯಿಗಳಂತೆ ಎಗರಿ' ಕ್ಷಣ ಮಾತ್ರದಲ್ಲಿ ಕೊಂದು ಹಾಕಿದ್ದಾರೆ ಎಂದು ವಿಂಚೆಸ್ಟರ್ ಕ್ರೌನ್ ಕೋರ್ಟ್ ಹೇಳಿದೆ.

ಈ ಘಟನೆಯು ಲಂಡನ್ ಹಾಗೂ ಭಾರತದಲ್ಲಿ ದೊಡ್ಡ ಸುದ್ದಿಯಾಗಿತ್ತು. ಫರ್ನಾಂಡಿಸ್ ಜತೆಗಿದ್ದ ವಿನೋದ್ ಪಿ ಎಂಬಾತದ ಮೇಲೂ ಇವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈತನ ಕಾಲರ್ ಬೋನ್ ಮುರಿದು ಹೋಗಿತ್ತು. ಇವರ ಮೇಲಿನ ದಾಳಿಯನ್ನು ಕಂಡ ಜೋಡಿ ಮೈಲ್ಸ್ ಎಂಬಾತ ಈ ಇಬ್ಬರನ್ನು ಪಕ್ಕದ ಹಡಗುಕಟ್ಟೆಗೆ ಕರೆದೊಯ್ದಿದ್ದರು. ಅಲ್ಲಿ ಫರ್ನಾಂಡಿಸ್ ಪ್ರಾಣ ತೊರೆದರು.

ಫೀಲ್ಡ್ಸ್(16), ರೋಜರ್ಸ್(18) ಮತ್ತು ಪ್ರಿಟ್ಜಾರ್ಡ್(18) ಎಂಬ ಮೂವರು ಯುವಕರು ವಿಚಾರಣೆ ವೇಳೆ ತಮ್ಮ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಧೀಶರಾಧ ರೋಯ್ಸೆ ಅವರು ಪ್ರತಿಯೊಬ್ಬರಿಗೂ ಆರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇನ್ನೋರ್ವ ಹದಿಹರೆಯದ ಯುವಕ ಇದೀಗ 15ರ ಯುವಕನಿಗೆ 12 ತಿಂಗಳ ಡಿಟೆನ್ಶನ್ ಮತ್ತು ಟ್ರೈನಿಂಗ್ ಆರ್ಡರ್ ವಿಧಿಸಲಾಗಿದೆ. ಇನ್ನೋರ್ವನಿಗೆ 18 ತಿಂಗಳ ನಾನ್ ಕಸ್ಟೋಡಿಯಲ್ ಸೂಪರ್‌ವಿಶನ್ ಆರ್ಡರ್ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತೀಯ, ಲಂಡನ್, ಕೊಲೆ ಜೈಲು
ಮತ್ತಷ್ಟು
ಲಂಕಾ: 33 ಉಗ್ರರ ಹತ್ಯೆ
ಮಲೇಷ್ಯಾ: ಭಾರತೀಯೊಬ್ಬನ ಸೆರೆ
ಪಾಕಿಸ್ತಾನ: 20 ತಾಲಿಬಾನ್ ಉಗ್ರರು ಬಂಧಮುಕ್ತ
ಭೂಗರ್ಭದ ಬಂಕರ್‌ನಲ್ಲಿ ಪ್ರಭಾಕರನ್: ಸೇನೆ
ಭಾರತ, ಚೀನಾ ವಿದ್ಯಾರ್ಥಿಗಳಿಗೆ ಪೈಪೋಟಿ ಕೊಡಿ: ಒಬಾಮಾ
ಬಷೀರ್ ವಿವಾದ: ಭದ್ರತಾಮಂಡಳಿಯಲ್ಲಿ ಭಿನ್ನಮತ