ಮೊಂಟಾನಾದ ಬುಟ್ಟೆಯಲ್ಲಿ ವಿಮಾನ ಅಪಘಾತ ಸಂಭವಿಸಿ, ಬಹುತೇಕ ಮಕ್ಕಳಿಂದ ಕೂಡಿದ 17 ಜನರು ಅಸುನೀಗಿದ್ದಾರೆಂದು ಫೆಡರಲ್ ವೈಮಾನಿಕ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಏಕ ಎಂಜಿನ್ ಟರ್ಬೊಪ್ರಾಪ್ ಹೊಂದಿದ್ದ ವಿಮಾನವು ಕ್ಯಾಲಿಫೋರ್ನಿಯದ ಒರ್ವಿಲ್ಲೆಯಿಂದ ಮೊಂಟಾನದ ಬೋಜೆಮಾನ್‌ಗೆ ತೆರಳುತ್ತಿತ್ತು. ಹಗುರ ವಿಮಾನವು ಬುಟ್ಟೆ ಪಟ್ಟಣದ ವಿಮಾನನಿಲ್ದಾಣ ಸಮೀಪಿಸುತ್ತಿದ್ದಂತೆ ಸ್ಮಶಾನದಲ್ಲಿ ಬಿದ್ದು ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ. ಪೈಲಟ್ ಕ್ಯಾಲಿಫೋರ್ನಿಯದ ಒರೊವಿಲ್ಲೆಯಿಂದ ಬುಟ್ಟೆ ಕಡೆಗೆ ವಿಮಾನವನ್ನು ತಿರುಗಿಸಿ ಭೂಸ್ಪರ್ಶಕ್ಕೆ ಪ್ರಯತ್ನಿಸುತ್ತಿದ್ದಂತೆ ವಿಮಾನನಿಲ್ದಾಣಕ್ಕೆ 500 ಅಡಿ ದೂರದಲ್ಲಿದ್ದಾಗಲೇ ಅಪಘಾತಕ್ಕೀಡಾಯಿತೆಂದು ಫೆಡರಲ್ ವೈಮಾನಿಕ ಆಡಳಿತ ತಿಳಿಸಿದೆ. ಮೋಡಕವಿದ ವಾತಾವರಣದಲ್ಲಿ ವಿಮಾನನಿಲ್ದಾಣಕ್ಕೆ ಸಮೀಪದಲ್ಲೇ ಅಪಘಾತಕ್ಕೀಡಾಯಿತೆಂದು ಎಫ್‌ಎಎ ಅಧಿಕಾರಿಗಳು ತಿಳಿಸಿದ್ದಾರೆ.
ಬುಟ್ಟೆಗೆ ಆಗ್ನೇಯಕ್ಕೆ 85 ಮೈಲುಗಳ ದೂರದ ಬೋಜೆಮಾನ್‌ಗೆ ವಿಮಾನವು ತೆರಳಬೇಕಿತ್ತು. ಆದರೆ ಪೈಲಟ್ ತನ್ನ ಫ್ಲೈಟ್ ಯೋಜನೆ ರದ್ದುಮಾಡಿ ಒಂದು ಹಂತದಲ್ಲಿ ಬುಟ್ಟೆಗೆ ವಿಮಾನವನ್ನು ತಿರುಗಿಸಿದರು ಎಂದು ಎಫ್‌ಎಎ ವಕ್ತಾರ ಮೈಕ್ ಫರ್ಗಸ್ ತಿಳಿಸಿದರು. ಇದು ಬಹುಷಃ ಮಕ್ಕಳಿಗೆ ಆಕಾಶಪ್ರವಾಸವಿರಬಹುದು ಎದು ಫರ್ಗುಸ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
|