ಆಫ್ರಿಕಾದಲ್ಲಿ ಕಾಂಡೋಮ್ ಬಳಕೆ ಕುರಿತು 16ನೇ ಪೋಪ್ ಬೆನೆಡಿಕ್ಟ್ ಅಭಿಪ್ರಾಯ ಕೇಂದ್ರಿತವಾದ ಗುಂಪು ಘರ್ಷಣೆಯಲ್ಲಿ 11 ಮಂದಿಯನ್ನು ಪ್ಯಾರಿಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಭಾನುವಾರದ ಸಾಮೂಹಿಕ ಪ್ರಾರ್ಥನೆ ಮುಗಿಸಿ ಆರಾಧಕರು ಹೊರಬರುತ್ತಿದ್ದಂತೆ ನಾಟ್ರೆ ಡೇಮ್ ಕೆಥೆಡ್ರಲ್ ಹೊರಗೆ ಕಾಂಡೊಮ್ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಪೋಪ್ ಪರ ಯುವಕರು ಅವರ ಜತೆ ಘರ್ಷಣೆಗಿಳಿದರು. ಆಫ್ರಿಕಾದಲ್ಲಿನ ಏಡ್ಸ್ ರೋಗಕ್ಕೆ ಕಾಂಡೋಮ್ ಮದ್ದಲ್ಲ ಎಂದು ಕಳೆದು ವಾರ ಹೇಳಿದ್ದ ಪೋಪ್, ಲೈಂಗಿಕ ನಡವಳಿಕೆ ಏಡ್ಸ್ ಹರಡಲು ಕಾರಣವೆಂದು ತಿಳಿಸಿದ್ದರು.
ಪೋಪ್ ಪ್ರತಿಕ್ರಿಯೆಯನ್ನು ವಿವಿಧ ಪಕ್ಷಗಳಿಗೆ ಸೇರಿದ ಫ್ರೆಂಚ್ ರಾಜಕಾರಣಿಗಳು ವ್ಯಾಪಕವಾಗಿ ಟೀಕಿಸಿದ್ದರು. ಪೋಪ್ ಅವರ ಹೇಳಿಕೆ ವಿರೋಧಿಸಿ ಫ್ರಾನ್ಸ್ ಏಡ್ಸ್ ಕಾರ್ಯಕರ್ತರಿಂದ ವಾರಾಂತ್ಯದ ಪ್ರತಿಭಟನೆಗಳು ಭುಗಿಲೆದ್ದವು.
ನಾಟ್ರೆ ಡೇಮ್ ಹೊರಗೆ ಉಚಿತ ಕಾಂಡೋಮ್ ವಿತರಿಸಲಾಯಿತು ಮತ್ತು ಏಡ್ಸ್ ಜಾಗೃತಿ ಕಾರ್ಯಕರ್ತರು ಧರ್ಮಗುರುವಿನ ಭಾವಚಿತ್ರಗಳನ್ನು ಹಿಡಿದು ಅವರಿಗೆ ಹತ್ಯೆಕೋರನೆಂಬ ಪಟ್ಟ ನೀಡಿದರು. ಆಕ್ಟ್ ಅಫ್ ಪ್ಯಾರಿಸ್‌ನ ಎರಿಕ್ ಮಾರ್ಟಿ 'ಪೋಪ್ ಪ್ರತಿಕ್ರಿಯೆ ಮಾರಕವಾಗಿದೆ' ಎಂದು ಹೇಳಿದರು. 20 ಮಿಲಿಯಕ್ಕಿಂತ ಹೆಚ್ಚು ಎಚ್‌ಐವಿ ಪಾಸಿಟಿವ್ ಜನರು ಆಫ್ರಿಕಾದಲ್ಲಿದ್ದಾರೆ. ಕಾಂಡೋಮ್ ಬಳಕೆಯಿಂದ ಏಡ್ಸ್ ಉಲ್ಭಣಿಸುತ್ತದೆಂದು ಅವರಿಗೆ ಹೇಳಿದರೆ ಏಡ್ಸ್‌ನಿಂದ ನರಳುವ ಜನರಿಗೆ ಅವಮಾನ ಮಾಡಿದಂತಾಗುತ್ತದೆಂದು' ಅವರು ಹೇಳಿದ್ದಾರೆ.
ಆದರೆ ಕಾರ್ಯಕರ್ತರು ಕ್ರೈಸ್ತ ಧರ್ಮಗುರುವಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆಂದು ರೋಮನ್ ಕ್ಯಾಥೋಲಿಕ್ ಪ್ರತಿಭಟನೆಕಾರರು ಹೇಳುತ್ತಾರೆ. ಕಾಂಡೋಮ್ ಬಳಕೆಯಿಂದ ಏಡ್ಸ್‌ನಿಂದ ಶೇ.100 ರಕ್ಷಣೆ ನೀಡುವುದಿಲ್ಲವೆನ್ನುವುದು ಪೋಪ್ ಮಾತಿನ ಅರ್ಥವೆಂದು ಅವರು ಹೇಳಿದ್ದಾರೆ.
|