ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಐಎಸ್‌ಐನಿಂದ ಭಯೋತ್ಪಾದಕರಿಗೆ ಕುಮ್ಮಕ್ಕಿಲ್ಲ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಸ್‌ಐನಿಂದ ಭಯೋತ್ಪಾದಕರಿಗೆ ಕುಮ್ಮಕ್ಕಿಲ್ಲ: ಪಾಕ್
ಪ್ರಜಾಪ್ರಭುತ್ವ ವ್ಯವಸ್ಥೆಗೆ ಪಾಕಿಸ್ತಾನದ ಪ್ರಸಕ್ತ ಮಿಲಿಟರಿ ನಾಯಕತ್ವ ಒತ್ತಾಸೆಯಾಗಿದೆ ಎಂದು ರಾಷ್ಟ್ರದ ವಿದೇಶಾಂಗ ಸಚಿವ ಶಾ ಮೆಹಮ‌ೂದ್ ಖುರೇಷಿ ಹೇಳಿದ್ದು, ಉಗ್ರಗಾಮಿಗಳಿಗೆ ಐಎಸ್ಐ ಗುಪ್ತಚರ ಸಂಸ್ಥೆ ಬೆಂಬಲಿಸುತ್ತಿರುವುದನ್ನು ನಿರಾಕರಿಸಿದ್ದಾರೆ.

'ಐಎಸ್‌ಐನ ಪ್ರಸಕ್ತ ನಾಯಕತ್ವದ ಬಗ್ಗೆ ತಾವು ವಿಶ್ವಾಸದಿಂದ ಮಾತನಾಡುವೆ. ತಾವು ಐಎಸ್‌ಐ ಮುಖ್ಯಸ್ಥ ಜನರಲ್ ಪಾಶಾ ಜತೆ ಸಮೀಪದಿಂದ ಕೆಲಸ ಮಾಡುತ್ತಿದ್ದು, ಪಾಕಿಸ್ತಾನ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಅವರು ಸ್ಪಷ್ಟ ನಿಲುವು ಹೊಂದಿದ್ದಾರೆ. ಉಗ್ರಗಾಮಿಗಳ ಬಗ್ಗೆ ಅವರು ಮೆದುಧೋರಣೆ ಹೊಂದಿಲ್ಲವೆಂದು' ಖುರೇಶಿ ಹೇಳಿದರು.

'ಪಾಕಿಸ್ತಾನ ಈಗ ಎದುರಿಸುತ್ತಿರುವ ಸವಾಲುಗಳನ್ನು, ಎದುರಿಸುವ ಆರ್ಥಿಕ ಸವಾಲುಗಳನ್ನು, ಎದುರಿಸುವ ಆಡಳಿತದ ಸವಾಲುಗಳನ್ನು, ಸರ್ವಾಧಿಕಾರದ ಅಡಿಯಲ್ಲಿ ನಾಗರಿಕ ಸಂಸ್ಥೆಗಳು ಹೇಗೆ ದುರ್ಬಲಗೊಂಡಿವೆಯೆಂದು ಮತ್ತು ಅವುಗಳನ್ನು ಬಲಪಡಿಸುವ ಅಗತ್ಯವೇಕೆಂದು ಅರ್ಥಮಾಡಿಕೊಳ್ಳುವಂಥ ಜನರಲ್ ಕಯಾನಿ ನಮ್ಮಲ್ಲಿದ್ದಾರೆಂದು ಭಾವಿಸುವುದಾಗಿ' ಖುರೇಷಿ ನುಡಿದರು.

ಪಾಕಿಸ್ತಾನವು ರಾಜಕೀಯ ಅರಾಜಕತೆಯ ಸುಳಿಯಿಂದ ಹೊರಬಂದ ಬಳಿಕ ರಾಷ್ಟ್ರವನ್ನು ಮಿಲಿಟರಿ ಕೈವಶ ಮಾಡಿಕೊಳ್ಳುವ ಶಂಕೆಗಳ ಬಗ್ಗೆ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಖುರೇಷಿ, ಪ್ರಸಕ್ತ ಮಿಲಿಟರಿ ನಾಯಕತ್ವವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಪೂರ್ಣ ಒತ್ತಾಸೆಯಾಗಿದೆಯೆಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅವಳಿ ಮಕ್ಕಳನ್ನು ಹೆತ್ತು ತಂದೆಯಾಗಲಿರುವ ತಾಯಿ!
'ಕಾಂಡೋಮ್' ಹೇಳಿಕೆ ಪೋಪ್ ವಿರುದ್ಧ ಪ್ರತಿಭಟನೆ
ಪಾಕ್‌ನಲ್ಲಿ ರಾಜತಾಂತ್ರಿಕ ಪ್ರಯತ್ನಕ್ಕೆ ಗಮನ: ಒಬಾಮಾ
ಲಾಸ್ ಏಂಜಲ್ಸ್: ವಿಮಾನ ಅಪಘಾತ-17 ಸಾವು
ಮಾತುಕತೆಗೆ ತಯಾರಿಲ್ಲ: ಲಂಕಾ ಸೇನೆ
ಅಪಹೃತ 16 ಭಾರತೀಯರು ಬಂಧಮುಕ್ತ