ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಾ ಸುಮಾರು ಒಂದು ತಿಂಗಳಿಂದ ಭಾರತದಲ್ಲಿ ಬೀಡುಬಿಟ್ಟಿದ್ದು, ನೇಪಾಳದ ಸಿಂಹಾಸನದಲ್ಲಿ ತಮ್ಮ ಮೊಮ್ಮಗನ್ನು ಕೂರಿಸುವಂತೆ ಮನವಿ ಮಾಡಲು ಭಾರತೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ.
ತಮ್ಮ ಬಂಧುಗಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮಧ್ಯಪ್ರದೇಶಕ್ಕೆ ತೆರಳಿದ್ದ ಷಾ, ಬಿಜೆಪಿ ನಾಯಕ ಆಡ್ವಾಣಿ ಅವರನ್ನು ಭೇಟಿ ಮಾಡಿದ್ದರು. ಕೆಲವು ದಿನಗಳ ಹಿಂದೆ ವಿತ್ತಸಚಿವ ಮತ್ತು ಮಾವೋವಾದಿ ನಾಯಕ ಡಾ.ಬಾಬುರಾಂ ಭಟ್ಟಾರಾಯ್, ಮಾಜಿ ರಾಜ ರಾಜಮನೆತನದ ಮರುಸ್ಥಾಪನೆಗೆ ಅವಿತರ ಪ್ರಯತ್ನ ನಡೆಸುತ್ತಿದ್ದಾರೆಂದು ಹೇಳಿದರು. ಅವರ ಕನಸು ತಮ್ಮ ಮೊಮ್ಮಗನಿಗೆ ಪಟ್ಟಾಭಿಷೇಕ ಮಾಡುವುದಾಗಿದ್ದು, ಅದು ಫಲಪ್ರದವಾಗುವುದಿಲ್ಲ ಎಂದು ನುಡಿದರು. ಜ್ಞಾನೇಂದ್ರ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಮದ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಪಾಟೀಲ್ ಚೌಹಾನ್ ಅವರನ್ನು ಭೇಟಿ ಮಾಡಿದ್ದಾರೆ.
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಗಿರಿಜಾ ಪ್ರಸಾದ್ ಕೊಯಿರಾಲಾ ಮತ್ತು ಮಾಜಿ ರಾಜ ಜ್ಞಾನೇಂದ್ರರ ಭೇಟಿಯು ಜ್ಞಾನೇಂದ್ರ ಮೊಮ್ಮಗನನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪನೆ ಮಾಡುವುದಾಗಿದೆಯೆಂದು ಮಾವೋವಾದಿ ನಾಯಕರು ವಿಶ್ಲೇಷಿಸಿದ್ದಾರೆ. |