ದಕ್ಷಿಣ ಅಫ್ಘಾನಿಸ್ಥಾನದ ಪ್ರದೇಶದಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉನ್ನತ ತಾಲಿಬಾನ್ ಕಮಾಂಡರ್ ಸಹಿತ ಹತ್ತು ಮಂದಿ ಉಗ್ರರು ಬಲಿಯಾಗಿದ್ದಾರೆಂದು ಅಮೆರಿಕ ಸೇನೆ ತಿಳಿಸಿದೆ. ಆದರೆ ಇದೇ ಪ್ರದೇಶದಲ್ಲಿ ಉಗ್ರರು ನಡೆಸಿರುವ ಪ್ರತಿದಾಳಿಯಲ್ಲಿ ಎಂಟು ಅಫ್ಘಾನ್ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇಬ್ಬರು ಇಬ್ಬರು ನ್ಯಾಟೋ ಪಡೆಯ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಹ ತಿಳಿಸಿದ್ದಾರೆ. |