ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೂಕಿ ಬಂಧಮುಕ್ತಕ್ಕೆ ವಿಶ್ವಸಂಸ್ಥೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಕಿ ಬಂಧಮುಕ್ತಕ್ಕೆ ವಿಶ್ವಸಂಸ್ಥೆ ಒತ್ತಾಯ
ಬರ್ಮದ ನಾಯಕಿ ಆಂಗ್ ಸಾನ್ ಸೂಕಿಯ ಬಂಧನವು ಅಂತಾರಾಷ್ಟ್ರೀಯ ಕಾನೂನು ಮತ್ತು ಬರ್ಮಾ ಕಾನೂನುಗಳ ಉಲ್ಲಂಘನೆಯಾಗಿದೆಯೆಂದು ವಿಶ್ವಸಂಸ್ಥೆ ತಿಳಿಸಿದ್ದು, ನಿರಂಕುಶ ಬಂಧನಗಳನ್ನು ಕುರಿತ ವಿಶ್ವಸಂಸ್ಥೆ ಕಾರ್ಯಪಡೆಯು ಸೂಕಿಯ ತಕ್ಷಣದ ಬಿಡುಗಡೆಗೆ ಕರೆ ನೀಡಿದೆ.

ಕಳೆದ 19 ವರ್ಷಗಳಲ್ಲಿ ಸುಮಾರು 13 ವರ್ಷಗಳನ್ನು ಗೃಹಬಂಧನದಲ್ಲೇ ಸೂಕಿ ಕಳೆದಿದ್ದು, ಅವರ ಪ್ರಜಾಪ್ರಭುತ್ವ ಪರ ಪಕ್ಷಗಳಿಗೆ ಸೇರಿದವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಭದ್ರತಾ ಅಪಾಯ ಉಂಟುಮಾಡುವ ವ್ಯಕ್ತಿಗಳನ್ನು ಮಾತ್ರ ಬಂಧನದಲ್ಲಿ ಇಡಬಹುದೆಂದು ಬರ್ಮದ ಕಾನೂನು ಹೇಳುತ್ತಿರುವುದಾಗಿ ಸಮಿತಿ ತಿಳಿಸಿದೆ.

ಸೂಕಿಯವರನ್ನು ತಕ್ಷಣವೇ ಬೇಷರತ್ತಾಗಿ ನವೆಂಬರ್‌ನಲ್ಲಿ ನೀಡಿದ ತೀರ್ಪಿನ ಪ್ರಕಾರ ಬಿಡುಗಡೆ ಮಾಡಬೇಕೆಂದು ಅದು ಆಗ್ರಹಿಸಿದೆ.ಸೂಕಿ ಅವರನ್ನು ಗೃಹಬಂಧನದಲ್ಲಿ ಇರಿಸಬೇಕೆಂಬ ಇತ್ತೀಚಿನ ಆದೇಶದ ನವೀಕರಣವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲದೇ ಮ್ಯಾನ್ಮಾರ್ ದೇಶೀಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ಕಾರ್ಯಸಮಿತಿಯು ಕಾನೂನು ಅಭಿಪ್ರಾಯ ನೀಡಿದೆ.

ಬರ್ಮಾದ ರಾಷ್ಟ್ರ ರಕ್ಷಣೆ ಕಾನೂನಿನ ಅಡಿಯಲ್ಲಿ ಸೂಕಿಯವರನ್ನು ಬಂಧಿಸಲಾಗಿದ್ದು, ಗರಿಷ್ಠ 5 ವರ್ಷಗಳವರೆಗೆ ನವೀಕೃತ ಬಂಧನ ಆದೇಶಗಳಿಗೆ ಅದು ಅವಕಾಶ ನೀಡುತ್ತದೆ. ಮೇ 2008ರಲ್ಲಿ ಈ ಐದು ವರ್ಷಗಳ ಅವಧಿ ಅಂತ್ಯಗೊಳ್ಳುತ್ತದೆ. ಕಳೆದ ವಾರ, ವಿಶ್ವಸಂಸ್ಥೆ ಮಾನವ ಹಕ್ಕುಗಳ ತನಿಖೆದಾರ ಥಾಮಸ್ ಓದಾ ಕ್ವಿಂಟಾನಾ ಸುಮಾರು 2000 ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಬರ್ಮಾಗೆ ಆಗ್ರಹಿಸಿದ್ದು, ಆಂಗ್ ಸಾನ್ ಸೂಕಿಯ ಬಂಧನದ ಬಗ್ಗೆ ತುರ್ತು ಪರಾಮರ್ಶೆ ಮಾಡುವಂತೆ ಒತ್ತಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪ್ಘಾನ್: ತಾಲಿಬಾನ್‌ ಕಮಾಂಡರ್‌ ಸಹಿತ 10 ಉಗ್ರರು ಬಲಿ
ಅಪಘಾತ: ನಾಲ್ವರು ಭಾರತೀಯ ವಿದ್ಯಾರ್ಥಿಗಳ ಬಲಿ
ಕ್ರೂಕ್ ಜಲಸಂಧಿ ಈಜಿದ ಅಜ್ಜಿಯ ಸಾಹಸ
ಮೊಮ್ಮಗನ ಪಟ್ಟಾಭಿಷೇಕಕ್ಕೆ ಜ್ಞಾನೇಂದ್ರ ಪ್ರಯತ್ನ
ಷರತ್ತುರಹಿತ ಮಾತುಕತೆಗೆ ಎಲ್‌ಟಿಟಿಇ ಪ್ರಸ್ತಾವನೆ
ಐಎಸ್‌ಐನಿಂದ ಭಯೋತ್ಪಾದಕರಿಗೆ ಕುಮ್ಮಕ್ಕಿಲ್ಲ: ಪಾಕ್