ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಮಾ.28ರಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ತಮ್ಮ ಭಾಷಣದಲ್ಲಿ ನೂತನ ಪ್ರಜಾಪ್ರಭುತ್ವ ಸರ್ಕಾರ ಪೂರೈಸಿದ ಒಂದು ವರ್ಷದ ಆಡಳಿತವನ್ನು ಪರಾಮರ್ಶೆ ಮಾಡಲಿದ್ದು, ರಾಷ್ಟ್ರ ಎದುರಿಸುತ್ತಿರುವ ಹಲವಾರು ಸವಾಲುಗಳಿಗೆ ಪ್ರತಿಯಾಗಿ ಯೋಜನೆಯೊಂದನ್ನು ರೂಪಿಸುವ ಸಂಭವವಿದೆಯೆಂದು ಸಂಸದೀಯ ವ್ಯವಹಾರ ಸಚಿವ ಬಾಬರ್ ಅವಾನ್ ತಿಳಿಸಿದ್ದಾರೆಂದು ನ್ಯೂಸ್ ಪತ್ರಿಕೆ ವರದಿ ಮಾಡಿದೆ.
ಬಲೂಚಿಸ್ತಾನಕ್ಕೆ ಸ್ವಾಯತ್ತತೆ ನೀಡುವ ವಿಷಯ ಕೂಡ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದ್ದು, ಸಂಸತ್ತಿನ ಮೂಲಕ ಮಾತ್ರ ಅದು ಬಗೆಹರಿಯಲು ಸಾಧ್ಯವೆಂದು ಪತ್ರಿಕೆ ತಿಳಿಸಿದೆ.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಇದು ಸಂಸತ್ತನ್ನು ಉದ್ದೇಶಿಸಿ ಜರ್ದಾರಿಯ ಎರಡನೇ ಭಾಷಣವಾಗಿದೆ.
|