ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ: ಗುಂಡಿನ ದಾಳಿಗೆ ಮಾನವ ಹಕ್ಕು ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ: ಗುಂಡಿನ ದಾಳಿಗೆ ಮಾನವ ಹಕ್ಕು ಆಕ್ರೋಶ
ಎಲ್‌ಟಿಟಿಇ ಕೈಯಲ್ಲಿ ಸಿಕ್ಕಿಬಿದ್ದಿರುವ ಸಾವಿರಾರು ತಮಿಳರ ವಾಸ್ತವ್ಯವಿರುವ ಗುಂಡು ಹಾರಾಟ ನಿಷೇಧದ ಪ್ರದೇಶದ ಮೇಲೆ ಶ್ರೀಲಂಕಾ ಸೇನೆ ಎಡಬಿಡದೇ ಗುಂಡಿನ ದಾಳಿ ನಡೆಸುತ್ತಿರುವುದನ್ನು ಅಂತಾರಾಷ್ಟ್ರೀಯ ಮಾನವ ಹಕ್ಕು ರಕ್ಷಣೆ ಕಾವಲು ಸಮಿತಿ ತೀವ್ರವಾಗಿ ಖಂಡಿಸಿದೆ.

ಕಳೆದ ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ನಾಗರಿಕರು ಸತ್ತಿದ್ದು, ಸತ್ತವರ ಸಂಖ್ಯೆ ದಿನದಿನಕ್ಕೂ ಏರುತ್ತಿದೆಯೆಂದು ಮಾನವ ಹಕ್ಕು ಕಾವಲು ಸಮಿತಿ ವರದಿಗಳನ್ನು ಉಲ್ಲೇಖಿಸಿ ತಿಳಿಸಿದೆ.ಗುಂಡು ಹಾರಿಸದ ವಲಯದಲ್ಲಿ ನಾಗರಿಕರ ಸಾವುನೋವಿನ ವರದಿಗಳನ್ನು ನಾವು ಸ್ವೀಕರಿಸುತ್ತಿದ್ದು, ಶ್ರೀಲಂಕಾ ಸರ್ಕಾರ ಈ ದಾಳಿಗಳನ್ನು ನಿರಾಕರಿಸಿದೆ ಎಂದು ಏಷ್ಯಾ ನಿರ್ದೇಶಕ ಬ್ರಾಡ್ ಅಡಾಮ್ಸ್ ತಿಳಿಸಿದರು.

ತಮಿಳು ವ್ಯಾಘ್ರಗಳು ನಾಗರಿಕರನ್ನು ಮಾನವ ಕವಚದಂತೆ ಬಳಸುತ್ತಿರುವುದರಿಂದ ರಕ್ತಪಾತ ಮತ್ತಷ್ಟು ಹೆಚ್ಚಿದೆಯೆಂದು ಅವರು ನುಡಿದಿದ್ದಾರೆ.ಸರ್ಕಾರ ಘೋಷಿಸಿದ ಗುಂಡು ಹಾರಿಸದ ವಲಯದಲ್ಲಿರುವ ಪುಟ್ಟುಮಟ್ಟಾಲನ್ ತಾತ್ಕಾಲಿಕ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ದೂರವಾಣಿಯಲ್ಲಿ ಮಾತನಾಡುತ್ತಾ, ಆಸ್ಪತ್ರೆಗೆ ಪ್ರತಿದಿನವೂ ಹತ್ತಾರು ನಾಗರಿಕನ್ನು ಕರೆತರಲಾಗುತ್ತಿದೆಯೆಂದು ತಿಳಿಸಿದ್ದಾಗಿ ಅಡಾಮ್ಸ್ ಹೇಳಿದ್ದಾರೆ.

ದೂರವಾಣಿಯಲ್ಲಿ ಮಾತನಾಡುವಾಗಲೇ ಶೆಲ್ ದಾಳಿ ನಡೆದಿದ್ದರಿಂದ ಸಂದರ್ಶನಕ್ಕೆ ಅಡ್ಡಿಯಾಯಿತೆಂದು ತಿಳಿದುಬಂದಿದೆ. ಆಸ್ಪತ್ರೆಯಿಂದ 250 ಕಿಮೀ ದೂರದಲ್ಲಿ ಫಿರಂಗಿ ಗುಂಡು ಬಡಿದಿದ್ದು, ಇಬ್ಬರು ನಾಗರಿಕರು ಸತ್ತಿದ್ದಾರೆ ಮತ್ತು 7 ಮಂದಿ ಗಾಯಗೊಂಡಿದ್ದಾರೆಂದು ವೈದ್ಯರು ಬಳಿಕ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 25 ಬಲಿ
28ರಂದು ಜಂಟಿ ಅಧಿವೇಶನದಲ್ಲಿ ಜರ್ದಾರಿ ಭಾಷಣ
ಅಮೆರಿಕ: ಅಪಘಾತಕ್ಕೆ ಆಂಧ್ರದ 4 ವಿದ್ಯಾರ್ಥಿಗಳು ಬಲಿ
ಸೂಕಿ ಬಂಧಮುಕ್ತಕ್ಕೆ ವಿಶ್ವಸಂಸ್ಥೆ ಒತ್ತಾಯ
ಅಪ್ಘಾನ್: ತಾಲಿಬಾನ್‌ ಕಮಾಂಡರ್‌ ಸಹಿತ 10 ಉಗ್ರರು ಬಲಿ
ಅಪಘಾತ: ನಾಲ್ವರು ಭಾರತೀಯ ವಿದ್ಯಾರ್ಥಿಗಳ ಬಲಿ