ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಫ್ಘಾನ್ ಸಮಸ್ಯೆಗೆ ಮಿಲಿಟರಿ ಪರಿಹಾರವಲ್ಲ: ಮುಲ್ಲೆನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಫ್ಘಾನ್ ಸಮಸ್ಯೆಗೆ ಮಿಲಿಟರಿ ಪರಿಹಾರವಲ್ಲ: ಮುಲ್ಲೆನ್
ಆಫ್ಘಾನಿಸ್ತಾನದಲ್ಲಿ ನೂತನ ಕಾರ್ಯತಂತ್ರ ಅನಾವರಣಕ್ಕೆ ಅಮೆರಿಕಕ್ಕೆ ಕೆಲವೇ ವಾರಗಳು ಬಾಕಿವುಳಿದಿರುವ ನಡುವೆ, ಮಿಲಿಟರಿ ಈ ಸಮಸ್ಯೆಗೆ ಪರಿಹಾರವಲ್ಲವೆಂದು ಅಮೆರಿಕದ ಉನ್ನತಾಧಿಕಾರಿ ಮುಲ್ಲನ್ ತಿಳಿಸಿದ್ದು, ಆಫ್ಘನ್ ಜನತೆ ಯಾವುದೇ ಹೊಸ ನೀತಿಯ ಕೇಂದ್ರ ಬಿಂದುವಾಗಬೇಕೆಂದು ಹೇಳಿದ್ದಾರೆ.

ನಾವು ಆಫ್ಘನ್ ಜನರನ್ನು ಕೇಂದ್ರಬಿಂದುವಾಗಿಸಿ, ಅವರ ಭದ್ರತೆ, ಆರ್ಥಿಕತೆಯ ಅಗತ್ಯವನ್ನು ಬೆಂಬಲಿಸುವ ಮಾರ್ಗವನ್ನು ರೂಪಿಸುತ್ತೇವೆಂದು ಜಂಟಿ ಕಾರ್ಯಪಡೆಯ ಅಧ್ಯಕ್ಷ ಮೈಕ್ ಮುಲ್ಲನ್ ತಿಳಿಸಿದರು.

ವಾಷಿಂಗ್ಟನ್ ತಾಲಿಬಾನ್ ಸೌಮ್ಯವಾದಿ ಬಣದ ಜತೆ ಹೊಂದಾಣಿಕೆ ಮಾಡಿಕೊಳ್ಳಬಹುದೆಂಬ ಮಾಧ್ಯಮದ ವದಂತಿಗಳಿಗೆ ಅವರ ಪ್ರತಿಕ್ರಿಯೆ ಹೊರಬಿದ್ದಿದೆ. ಆಫ್ಘಾನಿಸ್ತಾನ ಒಡೆಯಲಾಗದ ಗಟ್ಟಿಬೀಜ ಎಂದು ಅಧ್ಯಕ್ಷ ಬಾರಕ್ ಒಬಾಮಾ ಕೂಡ ಬಣ್ಣಿಸಿದ್ದಾರೆ.

ಟೆಲಿವಿಷನ್ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನೂತನ ಅಮೆರಿಕ ನೀತಿಯು ಒಂದೆರಡು ವಾರಗಳಲ್ಲಿ ಅನಾವರಣಗೊಳ್ಳಲಿದೆ ಎಂದು ಮುಲ್ಲನ್ ಹೇಳಿದರು. ನಾವು ಆಫ್ಘಾನಿಸ್ತಾನದಲ್ಲಿ ಎಲ್ಲಿದ್ದೇವೆಂದು ಗುರುತಿಸಬೇಕು. ಆಫ್ಘಾನಿಸ್ತಾನದ ಜನರ ಭದ್ರತೆ ತೀವ್ರ ಹದಗೆಟ್ಟಿರುವ ಸ್ಥಿತಿಯಲ್ಲಿ ನಾವಿದ್ದು, ಹಿಂಸಾಚಾರವು ತಾರಕಕ್ಕೇರಿದೆ ಎಂದು ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾ: ಗುಂಡಿನ ದಾಳಿಗೆ ಮಾನವ ಹಕ್ಕು ಆಕ್ರೋಶ
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 25 ಬಲಿ
28ರಂದು ಜಂಟಿ ಅಧಿವೇಶನದಲ್ಲಿ ಜರ್ದಾರಿ ಭಾಷಣ
ಅಮೆರಿಕ: ಅಪಘಾತಕ್ಕೆ ಆಂಧ್ರದ 4 ವಿದ್ಯಾರ್ಥಿಗಳು ಬಲಿ
ಸೂಕಿ ಬಂಧಮುಕ್ತಕ್ಕೆ ವಿಶ್ವಸಂಸ್ಥೆ ಒತ್ತಾಯ
ಅಪ್ಘಾನ್: ತಾಲಿಬಾನ್‌ ಕಮಾಂಡರ್‌ ಸಹಿತ 10 ಉಗ್ರರು ಬಲಿ