ಭಾರತೀಯ-ಅಮೆರಿಕನ್ ರಿಪಬ್ಲಿಕನ್ ನಾಯಕ ಬಾಬಿ ಜಿಂದಾಲ್ ಪತ್ನಿ ಸುಪ್ರಿಯ ಜಿಂದಾಲ್, 2012ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಪತಿ ಸ್ಪರ್ಧಿಯಲ್ಲ ನಿರಾಕರಿಸಿದ್ದಾರೆ.
2011ರಲ್ಲಿ ಲೂವಿಸಿಯಾನ ಗವರ್ನರ್ ಮರುಚುನಾವಣೆಯಲ್ಲಿ ತಮ್ಮ ಪತಿ ಗಮನ ಕೇಂದ್ರೀಕರಿಸುತ್ತಿರುವುದಾಗಿ ಅವರು ಹೇಳಿದರು. 2012ರ ಅಧ್ಯಕ್ಷೀಯ ಚುನಾವಣೆ ಬಗ್ಗೆ ಈಗಲೇ ಮಾತನಾಡುವ ಬದಲಿಗೆ, ರಾಷ್ಟ್ರ ಎದುರಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಪರಿಹಾರಕ್ಕೆ ಅಮೆರಿಕನ್ನರು ಗಮನವಹಿಸಬೇಕೆಂದು ಮೆಗಾನ್ ಮೆಕೇನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ನುಡಿದರು.
ಕಳೆದ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಅವರಿಗೆ ಸೋಲಪ್ಪಿದ ರಿಪಬ್ಲಿಕನ್ ಸೆನೆಟ್ ಸದಸ್ಯ ಜಾನ್ ಮೆಕೇನ್ ಅವರ ಪುತ್ರಿ ಮೆಗಾನ್. 2012ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪತಿಯು ರಿಪಬ್ಲಿಕನ್ ಪಕ್ಷವನ್ನು ಮುನ್ನಡೆಸುತ್ತಾರೆಂಬ ವರದಿಗಳ ಬಗ್ಗೆ ಇದು ಹೊಗಳಿಕೆಯ, ಒಳ್ಳೆಯ ಸುದ್ದಿ ಎಂದು ನುಡಿದರು. ಆದರೆ ಒಂದು ಪಕ್ಷವಾಗಿ ಮತ್ತು ಇಡೀ ಒಂದು ರಾಷ್ಟ್ರವಾಗಿ ಈಗಿನ ಸಮಸ್ಯೆಗಳ ಕಡೆ ಗಮನ ಕೇಂದ್ರೀಕರಿಸಬೇಕೇ ಹೊರತು ಮುಂದಿನ ಅಭ್ಯರ್ಥಿ ಯಾರೆಂದು ಚಿಂತಿಸುವುದಲ್ಲ ಎಂದು ಅವರು ಹೇಳಿದರು.
|